ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚೋದನೆ: ನಿವೃತ್ತ ಸೇನಾ ಜನರಲ್ ವಿರುದ್ಧದ ಪ್ರಕರಣ ರದ್ದು

Last Updated 2 ಮಾರ್ಚ್ 2023, 14:01 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ನಿವೃತ್ತ ಸೇನಾಧಿಕಾರಿಯೊಬ್ಬರ ವಿರುದ್ಧದ ಪ್ರಚೋದನೆ ಆರೋಪವನ್ನು ಪಾಕಿಸ್ತಾನ ನ್ಯಾಯಾಲಯ ಗುರುವಾರ ರದ್ದುಗೊಳಿಸಿದ್ದು, ಅವರನ್ನು ಪೊಲೀಸ್ ಕಸ್ಟಡಿಯಿಂದ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅಮ್ಜದ್ ಶೋಯೆಬ್ ಅವರನ್ನು ಇಸ್ಲಾಮಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದರು. ರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪದ ಮೇಲೆ ಶೋಯೆಬ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಶೋಯೆಬ್ ಅವರನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ತಾಹಿರ್ ಅಬ್ಬಾಸ್ ಸುಪ್ರಾ ವಿಚಾರಣೆ ನಡೆಸಿದರು.

ಆರೋಪಿ ಪರ ವಕೀಲ ಮಿಯಾನ್ ಅಶ್ಫಾಕ್, ‘ಈ ಪ್ರಕರಣ ಸುಳ್ಳು. ಆರೋಪಿಯು ಟಿ.ವಿ ಕಾರ್ಯಕ್ರಮದಲ್ಲಿ ಯಾವುದೇ ಸಮುದಾಯವನ್ನು ಗುರಿಯಾಗಿಸಿಲ್ಲ ಹೇಳಿಕೆ ನೀಡಿಲ್ಲ. ಅವರು ನೀಡಿದ ಹೇಳಿಕೆಗೆ ಬದ್ಧರಾಗಿದ್ದಾರೆ. ಕಾರ್ಯಕ್ರಮ ರಾತ್ರಿ 11 ಗಂಟೆಗೆ ಕೊನೆಗೊಂಡಿದೆ. ಮರುದಿನ ಯಾವುದೇ ಸೇನಾ ಸಿಬ್ಬಂದಿ ಅಥವಾ ನಾಗರಿಕರು ದೂರು ನೀಡಲು ಮುಂದೆ ಬರಲಿಲ್ಲ’ ಎಂದು ಹೇಳಿದರು.

ತನ್ನ ಹೇಳಿಕೆ ಬಗ್ಗೆ ಸ್ಪಷ್ಟಪಡಿಸುವಂತೆ ನ್ಯಾಯಾಲಯ ಜನರಲ್ ಅವರನ್ನು ಕೇಳಿದಾಗ, ‘ಚರಿತ್ರೆ ಬಗ್ಗೆ ಹೇಳಿದ್ದೆ ಹೊರತು ಜನರನ್ನು ದಂಗೆ ಏಳುವಂತೆ ಹೇಳಿಲ್ಲ. ಧರಣಿ ಮತ್ತು ರ್‍ಯಾಲಿಗಳಿಂದ ಏನನ್ನೂ ಸಾಧಿಸಲಾಗಿಲ್ಲ ಎಂದು ಇತಿಹಾಸದ ಬಗ್ಗೆ ಮಾತನಾಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT