ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ನ ‘ಸ್ಪೀಕರ್ ಆಫ್ ದಿ ಕನೆಸೆಟ್’ ಪುರಸ್ಕಾರ ನೀಡಿ ಗೌರವಿಸಿರುವುದು ರಾಜನೀತಿಯನ್ನು ಎತ್ತಿ ತೋರಿಸುತ್ತದೆ. ಇದು ಪರಸ್ಪರ ಸಬಲೀಕರಣಕ್ಕಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

‘ಇಸ್ರೇಲ್ನ ಅತ್ಯುನ್ನತ ನಾಗರಿಕ ಪುರಸ್ಕಾರ ಪಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಇದು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ಕ್ಷಣವಾಗಿದೆ. ಏಕೆಂದರೆ, ಇದು ಮನುಕುಲದ ಉದ್ದೇಶವನ್ನು ಎಲ್ಲರ ಕಲ್ಯಾಣಕ್ಕಾಗಿ ಮುನ್ನಡೆಸಲು ಪರಸ್ಪರ ಸಬಲೀಕರಣಕ್ಕಾಗಿ ರಾಷ್ಟ್ರಗಳ ನಡುವೆ ಸಂಪರ್ಕ ಸಾಧಿಸುತ್ತಿರುವ ಮೋದಿ ಅವರ ರಾಜನೀತಿಯ ಉದಾಹರಣೆಯಾಗಿದೆ’ ಎಂದು ಅಮಿತ್ ಶಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಪ್ರಧಾನಿ ಮೋದಿ ಅವರಿಗೆ ಬುಧವಾರ ‘ಸ್ಪೀಕರ್ ಆಫ್ ದಿ ಕನೆಸೆಟ್’ ಪ್ರಶಸ್ತಿ ನೀಡಲಾಗಿದೆ.

ಮೋದಿ ಅವರು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಎರಡೂ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿದ್ದಾರೆ.

2018ರಲ್ಲಿ ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಗ್ರ್ಯಾಂಡ್ ಕಾಲರ್’ ಗೌರವ ನೀಡಿ ಸತ್ಕರಿಸಿದ್ದರು. ವಿದೇಶಿ ಗಣ್ಯರಿಗೆ ಪ್ಯಾಲೆಸ್ಟೀನ್ನಲ್ಲಿ ನೀಡಲಾಗುವ ಅತ್ಯುನ್ನತ ಗೌರವ ಇದಾಗಿದೆ.

ಪ್ರಸ್ತುತ, ಪ್ರಧಾನಿ ಮೋದಿ ಅವರು ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಇಸ್ರೇಲ್ಗೆ ಭೇಟಿ ನೀಡಿದ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾ ಅವರು ಬೆನ್ ಗುರಿಯನ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಎರಡೂ ದೇಶದ ಪ್ರಧಾನಿಗಳ ನಿಯೋಗ ಮಟ್ಟದಲ್ಲಿ ಇಂದು (ಗುರುವಾರ) ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ, ಉಭಯ ದೇಶಗಳ ನಡುವಿನ ರಕ್ಷಣೆ ಹಾಗೂ ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ವಿಷಯವಾಗಿರಲಿದೆ ಎಂಬುದು ತಿಳಿದುಬಂದಿದೆ.

ವಿಜ್ಞಾನ–ತಂತ್ರಜ್ಞಾನ, ನಾವೀನ್ಯ, ವ್ಯಾಪಾರ– ಹೂಡಿಕೆ, ಕೃಷಿ–ನೀರಾವರಿ ಕ್ಷೇತ್ರದಲ್ಲಿ ಭಾರತ–ಇಸ್ರೇಲ್ ನಡುವಿನ ಪರಸ್ಪರ ಸಹಕಾರ ಕುರಿತಂತೆ ಚರ್ಚಿಸಲಿರುವ ಉಭಯ ದೇಶಗಳ ಪ್ರಧಾನಿ, ತಮ್ಮ ಮಾತುಕತೆಯಲ್ಲಿ ಗಾಜಾ ಸೇರಿದಂತೆ ಮಧ್ಯಪ್ರಾಚ್ಯದ ಉದ್ವಿಗ್ನತೆಯ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.
.ಇನ್ಸ್ಟಾದಲ್ಲಿ 10 ಕೋಟಿ ಫಾಲೋವರ್ಸ್: ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ.ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್ ಸಂಸತ್ತಿನಲ್ಲಿ PM ಮೋದಿ .ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್ನ ಕೈಗೊಂಬೆ: ಕಾಂಗ್ರೆಸ್ ವಾಗ್ದಾಳಿ .ಇಸ್ರೇಲ್ಗೆ 9 ವರ್ಷಗಳ ಬಳಿಕ ಮೋದಿ ಎರಡನೇ ಭೇಟಿ: ನೆತನ್ಯಾಹು ಜತೆ ಮಾತುಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.