ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಪ್ರಧಾನಿ ಮೋದಿಯಿಂದ 206 ಪ್ರಚಾರ ಸಭೆ, 80 ಸಂದರ್ಶನ

Published 30 ಮೇ 2024, 23:35 IST
Last Updated 30 ಮೇ 2024, 23:35 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಅಬ್ಬರದ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರ ಈ ಚುನಾವಣೆಯ ತಮ್ಮ ಕೊನೆಯ ಪ್ರಚಾರ ಸಭೆ ನಡೆಸಿದರು.

ಚುನಾವಣಾ ಆಯೋಗ (ಇ.ಸಿ) ಮಾರ್ಚ್‌ 16ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿತ್ತು. ಅದಾದ ಬಳಿಕ ಮೋದಿ ಅವರು ರೋಡ್‌ ಶೋ, ರ್‍ಯಾಲಿ, ಬಹಿರಂಗ ಪ್ರಚಾರ ಸೇರಿದಂತೆ ಒಟ್ಟು 206 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಅವರು 68 ದಿನಗಳವರೆಗೆ 145 ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಅದನ್ನು ಮೀರಿಸಿ ಪ್ರಚಾರ ಸಭೆಗಳನ್ನು ನಡೆಸಿದ್ದು, ಒಟ್ಟು 76 ದಿನಗಳಲ್ಲಿ 206 ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. 

ಆಯೋಗವು ಚುನಾವಣಾ ದಿನಾಂಕ ಘೋಷಿಸಿದಾಗ, ಮೋದಿ ಅವರು ಮಾರ್ಚ್‌ 15ರಿಂದ 17ರವರೆಗೆ ಮೂರು ದಿನ ದಕ್ಷಿಣ ಭಾರತದ ಎಲ್ಲ ಐದು ರಾಜ್ಯಗಳನ್ನು ಒಳಗೊಂಡ ಪ್ರವಾಸದಲ್ಲಿದ್ದರು. ಬಿಜೆಪಿಯು 2019ರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಕೇರಳ ಮತ್ತು ತಮಿಳುನಾಡು ರಾಜ್ಯಕ್ಕೆ ಬಿಜೆಪಿ ಒತ್ತು ನೀಡಿತ್ತು. ಅದರ ಜತೆಗೆ ಕರ್ನಾಟಕದಲ್ಲಿ ತನ್ನ ಬಲವನ್ನು ಉಳಿಸಿಕೊಳ್ಳಲು ಮತ್ತು ತೆಲಂಗಾಣದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನ ನೀಡಿತ್ತು.

73ರ ವಯಸ್ಸಿನ ಮೋದಿ ಅವರು ಚುನಾವಣಾ ಪ್ರಚಾರದ ಸಭೆಗಳೇ ಅಲ್ಲದೇ 80 ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದಾರೆ. ಅಂದರೆ ಮತದಾನ ಪ್ರಾರಂಭವಾದಾಗಿನಿಂದ ಅವರು ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಸಂದರ್ಶನ ನೀಡಿದ್ದಾರೆ.

ಮೋದಿ ಅವರ ಈ ಅಬ್ಬರದ ಪ್ರಚಾರದ ಯಶಸ್ಸಿನ ಪ್ರಮಾಣ ಎಷ್ಟು ಎಂಬುದು ಜೂನ್‌ 4ರ ಫಲಿತಾಂಶದ ದಿನ ಗೊತ್ತಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT