ನವದೆಹಲಿ: ಎಲ್ಲಾ ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಸಂಸತ್ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆ ನಡೆಸುತ್ತವೆ ಎಂದು ನಾನು ಭಾವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್‌ನ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಮಂಗಳವಾರ ಬಜೆಟ್ ಮಂಡನೆಯಾಗಲಿದ್ದು, ಸುಗಮ ಕಲಾಪಕ್ಕೆ ಪ್ರಧಾನಿ ಮನವಿ ಮಾಡಿದ್ದಾರೆ.

‘ಇಂದಿನಿಂದ ಬಜೆಟ್ ಅಧಿವೇಶನ ಆರಂಭ. ನಾನು ನಿಮ್ಮನ್ನು ಮತ್ತು ಎಲ್ಲಾ ಸಂಸದರನ್ನು ಈ ಅಧಿವೇಶನಕ್ಕೆ ಸ್ವಾಗತಿಸುತ್ತೇನೆ. ಭಾರತಕ್ಕೆ ಜಾಗತಿಕವಾಗಿ ಸಾಕಷ್ಟು ಅವಕಾಶಗಳಿವೆ. ಈ ಅಧಿವೇಶನವು ದೇಶದ ಆರ್ಥಿಕ ಪ್ರಗತಿಗೆ ನೆರವಾಗಲಿ. ಲಸಿಕೆ ಕಾರ್ಯಕ್ರಮ, ‘ಮೇಡ್ ಇನ್ ಇಂಡಿಯಾ’ ಲಸಿಕೆ ವಿಶ್ವದಲ್ಲೇ ವಿಶ್ವಾಸ ಮೂಡಿಸುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಈ ಅಧಿವೇಶನದಲ್ಲಿ ನಡೆಯುವ ಮುಕ್ತ ಚರ್ಚೆಗಳು ಭಾರತದ ಜಾಗತಿಕ ಪ್ರಭಾವಕ್ಕೆ ಪ್ರಮುಖ ಅವಕಾಶವಾಗಬಹುದು. ಎಲ್ಲಾ ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆಗಳನ್ನು ನಡೆತ್ತಾರೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

‘ಚುನಾವಣೆಗಳು ಅಧಿವೇಶನ ಮತ್ತು ಚರ್ಚೆಯ ಮೇಲೆ ಪರಿಣಾಮ ಬೀರುವುದು ನಿಜ. ಆದರೆ, ಚುನಾವಣೆಗಳು ನಡೆಯಲಿ. ಇಡೀ ವರ್ಷಕ್ಕೆ ನೀಲನಕ್ಷೆಯನ್ನು ಒದಗಿಸಿಕೊಡುವ ಈ ಅಧಿವೇಶವು ಫಲಪ್ರದವಾಗಲಿ ಎಂದು ನಾನು ಎಲ್ಲ ಸಂಸದರಲ್ಲಿ ಮನವಿ ಮಾಡುತ್ತೇನೆ. ಈ ವರ್ಷವು ದೇಶವನ್ನು ಆರ್ಥಿಕತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಉತ್ತಮ ಅವಕಾಶ ಕಲ್ಪಿಸಲಿ’ ಎಂದು ಪ್ರಧಾನಿ ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.