‘ಉತ್ತರ ಪ್ರದೇಶದಲ್ಲಿ ತಯಾರಾದ ಕ್ಷಿಪಣಿಗಳಿಂದ ಉಗ್ರರಿಗೆ ತಕ್ಕ ಶಾಸ್ತಿ’
ಪಾಕಿಸ್ತಾನವು ಭಾರತದ ವಿರುದ್ಧ ಮತ್ತೆ ಯಾವುದೇ ಪಾಪಕೃತ್ಯ ಎಸಗಿದಲ್ಲಿ ಉತ್ತರ ಪ್ರದೇಶದಲ್ಲಿ ತಯಾರಾದ ಕ್ಷಿಪಣಿಗಳು ಭಯೋತ್ಪಾದಕನ್ನು ನಿರ್ಮಾಮ ಮಾಡಲಿವೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ‘ಪಹಲ್ಗಾಮ್ ಉಗ್ರ ದಾಳಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದೆ. ಶಿವನ ಆಶೀರ್ವಾದದಿಂದಾಗಿ ‘ಆಪರೇಷನ್ ಸಿಂದೂರ’ದ ಮೂಲಕ ಅದು ಸಾಧ್ಯವಾಯಿತು. ಈ ಯಶಸ್ಸನ್ನು ಮಹದೇವನ ಪಾದಕ್ಕೆ ಅರ್ಪಿಸುತ್ತೇನೆ’ ಎಂದರು. ದೇಶದ 140 ಕೋಟಿ ಜನರ ಒಗ್ಗಟ್ಟೇ ಆಪರೇಷನ್ ಸಿಂಧೂರದ ಶಕ್ತಿ ಎಂದರು. ಆಪರೇಷನ್ ಸಿಂಧೂರವು ಜಗತ್ತಿನೆದುರು ಭಾರತದ ಶಕ್ತಿ–ಸಾಮರ್ಥ್ಯವನ್ನು ಅನಾವರಣ ಮಾಡಿದೆ. ಭಾರತದ ಮೇಲೆ ದಾಳಿ ಮಾಡಲು ಧೈರ್ಯ ತೋರುವವರು ಪಾತಾಳ ಲೋಕದಲ್ಲಿ ಅಡಗಿ ಕುಳಿತರೂ ದೇಶವು ಸಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದೆ ಎಂದು ಹೇಳಿದರು.