ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಭಾರತದ ಮುಖವಾಗಿದ್ದಾರೆ: ಅಮೆರಿಕ ಕಾಂಗ್ರೆಸ್ ಸದಸ್ಯ

Published 10 ಏಪ್ರಿಲ್ 2024, 6:08 IST
Last Updated 10 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮುಖವಾಗಿದ್ದಾರೆ ಎಂದಿರುವ ಅಮೆರಿಕದ ಹಿರಿಯ ಕಾಂಗ್ರೆಸ್ಸಿಗರೊಬ್ಬರು, 2014ರಿಂದ ದೇಶ ಕಂಡ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಅಮೆರಿಕ ದೇಶಗಳ ದ್ವಿಪಕ್ಷೀಯ ಸಂಬಂಧ ಬಲಗೊಂಡಿದೆ ಎಂದು ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರತದ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರೆಂದು ಪರಿಗಣಿಸಲಾದ ಬ್ರಾಡ್ ಶೆರ್ಮನ್ ಹೇಳಿದ್ದಾರೆ.

ಆದರೆ, ಭಾರತ-ಅಮೆರಿಕ ಬಾಂಧವ್ಯದಲ್ಲಿ ರಷ್ಯಾ ಜತೆಗಿನ ರಕ್ಷಣಾ ಸಂಬಂಧ ಸವಾಲಾಗಿದೆ ಎಂದಿದ್ದಾರೆ.

69 ವರ್ಷದ ಶೆರ್ಮನ್ ಅವರು ಸದನದ ವಿದೇಶಿ ವ್ವವಹಾರಗಳ ಸಮಿತಿಯಲ್ಲಿ ಡೆಮಾಕ್ರಟ್ ಪಕ್ಷ ಹಿರಿಯ ಸದಸ್ಯರಾಗಿಗಿದ್ದು, ಕಳೆದ 28 ವರ್ಷಗಳಿಂದ ಭಾರತ-ಅಮೆರಿಕ ಸಂಬಂಧಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

‘ಅಮೆರಿಕ-ಭಾರತದ ಸಂಬಂಧದಲ್ಲಿ ಅಗಾಧವಾದ ಬಲವರ್ಧನೆಯಾಗಿದೆ. ಇದು ನನಗೆ ತಿಳಿದಿದೆ. ೇಕೆಂದರೆ, ನಾನು ಅಮೆರಿಕ ಸಂಸತ್ತಿನ ಅಮೆರಿಕ–ಭಾರತ ಕಾಕಸ್‌ನ ಮಾಜಿ ಅಧ್ಯಕ್ಷನಾಗಿದ್ದೇನೆ. ಇದು ದೊಡ್ಡ ಕಾಕಸ್ ಆಗಿದ್ದು, ಉಭಯ ದೇಶಗಳ ಸಂಬಂಧ ದೊಡ್ಡದಾಗಿ ಬೆಳೆದಿದೆ. ವಿಶೇಷವಾಗಿ ರಕ್ಷಣಾ ವಲಯದಲ್ಲಿ ಮಿಲಿಟರಿ ಗುಪ್ತಚರ ಮಾಹಿತಿ ಹಂಚಿಕೆಯೊಂದಿಗೆ ಅತಿದೊಡ್ಡ ಜಂಟಿ ಕಾರ್ಯಾಚರಣೆಗಳು ಮತ್ತು ತಾಲೀಮುಗಳನ್ನು ನೋಡಿದ್ದೇವೆ. ಇಂಡೊ-ಪೆಸಿಫಿಕ್ ಅನ್ನು ಮುಕ್ತ ಮತ್ತು ಶಾಂತಿಯುತವಾಗಿಡಲು ಪ್ರಯತ್ನಿಸುವತ್ತ ಗಮನಹರಿಸಿದ್ದೇವೆ’ಎಂದು ಅವರು ಹೇಳಿದ್ದಾರೆ.

‘ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟು ಆಗಸದೆತ್ತರಕ್ಕೆ ಚಾಚಿದೆ. ಇಂಡೋ ಅಮೆರಿಕನ್ನರು ತ್ಯುತ್ತಮ ವಿದ್ಯಾಭ್ಯಾಸ ಪಡೆದವರಾಗಿದ್ದು, ಅಮೆರಿಕದಲ್ಲಿರುವ ಇತರೆ ದೇಶದವರಿಗಿಂತ ಹೆಚ್ಚು ಆದಾಯ ಪಡೆಯುತ್ತಿದ್ಧಾರೆ’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT