ಜಾಗತಿಕ ವೇದಿಕೆಯಲ್ಲಿ ಬಲಿಷ್ಟ ನಾಯಕ ಎಂದು ಗುರುತಿಸಿಕೊಂಡಿರುವ ಭಾರತದ ಪ್ರದಾನಿ ನರೇಂದ್ರ ಮೋದಿ ಅವರು ಸದ್ಯ ಇಸ್ತ್ರೇಲ್ ಪ್ರವಾಸದಲ್ಲಿದ್ದಾರೆ. ಇಸ್ರೇಲ್ ದೇಶದ ಸಂಸತ್ತು ನೀಡುವ ಅತ್ಯುನ್ನತ ಪ್ರಶಸ್ತಿ ‘ಸ್ಪೀಕರ್ ಆಫ್ ದ ನೆಸೆಟ್ ಮೆಡಲ್' ಅನ್ನು ನರೇಂದ್ರ ಮೋದಿಯವರಿಗೆ ನೀಡಿದೆ. ಈ ಪದಕವನ್ನು ಪಡೆದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆ ನರೇಂದ್ರ ಮೋದಿಯವರು ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ವಿದೇಶಗಳಿಗೆ ಭೇಟಿ ಮಾಡುತ್ತಿರುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದೇಶಗಳಿಂದ ಹಲವು ಪ್ರಶಸ್ತಿ ಹಾಗೂ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
.ದೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ; ಇಲ್ಲಿ ವೀಕ್ಷಿಸಿ....ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರ ದಾಳಿ: ಮುಂಬೈ ಪೊಲೀಸರು ಹೇಳಿದ್ದೇನು?.
ನರೇಂದ್ರ ಮೋದಿ ಅವರಿಗೆ ಈವರೆಗೆ ಯಾವ ಯಾವ ದೇಶಗಳು ಅತ್ಯುನ್ನತ ಪ್ರಶಸ್ತಿ ನೀಡಿವೆ

2016ರಲ್ಲಿ ಸೌದಿ ಅರೆಬಿಯಾವು ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರತಿಷ್ಟಿತ ಪ್ರಶಸ್ತಿ ‘ಆರ್ಡರ್ ಆಫ್ ಕಿಂಗ್ ಅಬ್ಧುಲ್ ಅಜೀಜ್’ ನೀಡಿ ಗೌರವಿಸಿದೆ.

ಇದೇ ವರ್ಷ ಅಫ್ಘಾನಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಮೋದಿ ಅವರಿಗೆ ಅಲ್ಲಿನ ಸರ್ಕಾರ ‘ಆರ್ಡರ್ ಆಫ್ ಅಮಾನುಲ್ಲಾ ಖಾನ್’ ಎಂಬ ಪ್ರಶಸ್ತಿ ನೀಡಿತ್ತು.

2018ರಲ್ಲಿ ಪ್ಯಾಲೆಸ್ಟೈನ್ಗೆ ಭೇಟಿ ನೀಡಿದ್ದಾಗ ಅಲ್ಲಿನ ಸರ್ಕಾರ ‘ಆರ್ಡರ್ ಆಫ್ ದೆ ಸ್ಟೇಟ್ ಆಫ್ ಪ್ಯಾಲೆಸ್ಟೈನ್’ ಎಂಬ ಅಲ್ಲಿನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತ್ತು.

2019ರಲ್ಲಿ ಮೋದಿ ಅವರು ದ್ವೀಪರಾಷ್ಟ್ರವಾದ ಮಾಲ್ಡೀವ್ಸ್ ಭೇಟಿ ನೀಡಿದ್ದರು. ಆ ದೇಶವು ಮೋದಿ ಅವರಿಗೆ ‘ಆರ್ಡರ್ ಆಫ್ ಇಜುದ್ದೀನ್’ ಪ್ರಶಸ್ತಿ ನೀಡಿ ಗೌರವಿಸಿದೆ.

ಇದೇ ವರ್ಷ ಅರಬ್ ಗಣರಾಜ್ಯ ದೇಶಗಳಿಗೆ ಭೇಟಿ ನೀಡಿದ ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರಮುಖ ಪ್ರಶಸ್ತಿ ‘ಆರ್ಡರ್ ಆಫ್ ಜಯೇದ್’ ಎಂಬ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿ ಗೌರವಿಸಿದೆ.

ಬಹ್ರೇನ್ ಕೂಡಾ ತನ್ನ ಅತ್ಯುನ್ನತ ಪ್ರಶಸ್ತಿ ‘ಆರ್ಡರ್ ಆಫ್ ದಿ ರಿನೇಸ್ಸಾನ್’ ನೀಡಿ ಗೌರವಿಸಿದೆ.

2020ರಲ್ಲಿ ಅಮೆರಿಕಾ ಪ್ರವಾಸ ಮಾಡಿದ್ದ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಮಿಲಿಟರಿ ಪ್ರಶಸ್ತಿ ‘ಲೀಜನ್ ಆಫ್ ಮೆರಿಟ್’ ಅನ್ನು ನೀಡಿತ್ತು.

2023ರಲ್ಲಿ ಫಿಜಿ ದೇಶಕ್ಕೆ ಭೇಟಿ ನೀಡಿದ್ದ ಮೋದಿ ಅವರಿಗೆ ಅಲ್ಲಿನ ‘ಆರ್ಡರ್ ಆಫ್ ಫಿಜಿ’ ನೀಡಿತ್ತು. ಇದು ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

ಈಜಿಪ್ಟ್ ದೇಶವು ನರೇಂದ್ರ ಮೋದಿ ಅವರಿಗೆ ಅಲ್ಲಿನ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾದ ‘ಆರ್ಡರ್ ಆಫ್ ದಿ ನೈಲ್’ ಗೌರವ ನೀಡಿದೆ.

ಫ್ರಾನ್ಸ್ ದೇಶವು ‘ಲೀಜನ್ ಆಫ್ ಹಾನರ್’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಗ್ರೀಸ್ ದೇಶ ತನ್ನ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಆರ್ಡರ್ ಆಫ್ ಹಾನರ್’ ನೀಡಿ ಗೌರವಿಸಿದೆ.

2024ರಲ್ಲಿ ಭೂತಾನ್ ಪ್ರವಾಸದನ ವೇಳೆ ಮೋದಿ ಅವರಿಗೆ ಅಲ್ಲಿನ ಸರ್ಕಾರ ‘ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್’ ಎಂಬ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದೆ.

ರಷ್ಯಾ ದೇಶವು ಮೋದಿಯವರಿಗೆ ‘ ಆರ್ಡರ್ ಆಫ್ ಸೈಂಟ್ ಆಂಡ್ರ್ಯೂ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

2024ರಲ್ಲಿ ನೈಜೀರಿಯಾವು ಮೋದಿ ಅವರಿಗೆ ‘ ಆರ್ಡರ್ ಆಫ್ ನೈಜಿರ್’ ಪ್ರಶಸ್ತಿ ನೀಡಿದೆ.

ಡೊಮಿನಿಕಾದ ಪ್ರವಾಸದ ವೇಳೆ ‘ಡೊಮಿನಿಕಾ ಅವಾರ್ಡ್ ಆಫ್ ಹಾನರ್’ ಎಂಬ ಅಲ್ಲಿನನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದೆ.

ಗಯಾನ ದೇಶ 2024ರ ಪ್ರವಾಸದ ವೇಳೆ ಮೋದಿ ಅವರಿಗೆ ‘ಆರ್ಡರ್ ಆಫ್ ಎಕ್ಸಲೆನ್ಸ್ ಆಫ್ ಗಯಾನ’ ಪ್ರಶಸ್ತಿ ನೀಡಿದೆ.

ಬಾರ್ಬಡೋಸ್ ದೇಶ ಅಲ್ಲಿನ ಉನ್ನತ ಪ್ರಶಸ್ತಿಯಾದ ‘ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ನೀಡಿ ಗೌರವಿಸಿದೆ.

ಕುವೈತ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್‘ ಗೌರವವನ್ನು ಮೋದಿ ಅವರಿಗೆ ನೀಡಿದೆ.

2025ರಲ್ಲಿ ನಮೀಬಿಯಾ ‘ವೆಲ್ವಿಟ್ಶಿಯಾ ಮಿರಾಬಿಲಿಸ್‘ ಪ್ರಶಸ್ತಿ ನೀಡಿದೆ.

ಬ್ರೆಜಿಲ್ ದೇಶ ‘ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್’, ಶ್ರೀಲಂಕಾ ‘ಮಿತ್ರ ವಿಭೂಷಣ’, ಟ್ರಿನಿಡಾಡ್ ಆಂಡ್ ಟೊಬಾಗೊ ದೇಶ ‘ಆರ್ಡರ್ ಆಫ್ ದಿ ರಿಪಬ್ಲಿಕ್‘, ಮಾರಿಷಸ್ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್, ಸೈಪ್ರಸ್ ‘ಕ್ರಾಸ್ ಆಫ್ ಮಕಾರಿಯೋಸ್ III’, ಘಾನಾ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್‘ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

2026ರಲ್ಲಿ ಇಸ್ರೇಲ್ ‘ಸ್ಪೀಕರ್ ಆಫ್ ದ ನೆಸೆಟ್ ಮೆಡಲ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

.ನಾನು ಹುಟ್ಟಿದ ದಿನವೇ ಇಸ್ರೇಲ್ ದೇಶ ಘೋಷಣೆಯಾಯಿತು: ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.