ಕಾನ್ಪುರ: ‘ಮುಂದಿನ 25 ವರ್ಷಗಳಲ್ಲಿ ಭಾರತ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಎಂದು ಬಯಸುತ್ತಿರೋ, ಅದನ್ನು ಸಾಧಿಸುವ ನಿಟ್ಟಿನಲ್ಲಿ ಈಗಿನಿಂದಲೇ ಐಐಟಿ ಪದವೀಧರರು ಕಾರ್ಯಪ್ರವೃತ್ತರಾಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಐಐಟಿ–ಕಾನ್ಪುರದ 54ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಲಾಗಿದೆ. ನವ ಪದವೀಧರರುಅನುಕೂಲಗಳ ಬದಲಾಗಿ ಸವಾಲುಗಳನ್ನು ಆಯ್ಕೆ ಮಾಡಿಕೊಂಡು, ದೇಶದ ಚುಕ್ಕಾಣಿ ಹಿಡಿಯಲು ಮುಂದಾಗಬೇಕು’ ಎಂದರು.

ಇದನ್ನೂ ಓದಿ:ಸಾರ್ವಜನಿಕ ಹಿತಾಸಕ್ತಿಗಾಗಿ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ: ಕೇಂದ್ರ

‘ಸ್ವಾತಂತ್ರ್ಯ ನಂತರ ಭಾರತವೂ ಹೊಸ ಪಯಣ ಆರಂಭಿಸಿದೆ. ಮುಂದಿನ 25 ವರ್ಷಗಳ ನಂತರ ದೇಶ ಸಂಪೂರ್ಣ ಸ್ವಾವಲಂಬಿಯಾಗಬೇಕು. ಈ ಗುರಿ ಸಾಧನೆಗೆ ಸಾಕಷ್ಟು ಕಾರ್ಯವಾಗಬೇಕಾಗುತ್ತದೆ. ಆದರೆ, ಎರಡು ಪೀಳಿಗೆಗಳನ್ನು ಕಂಡಿರುವ ದೇಶ, ಸಾಕಷ್ಟು ಸಮಯವನ್ನೂ ವ್ಯರ್ಥ ಮಾಡಿದೆ. ಇನ್ನು ಮುಂದೆ ಎರಡು ನಿಮಿಷವನ್ನು ಸಹ ನಾವು ವ್ಯರ್ಥ ಮಾಡಬಾರದು’ ಎಂದು ಅವರು ಹೇಳಿದರು.

‘ದೇಶವು ಈಗ ವಿಪುಲ ಅವಕಾಶಗಳ ಹೊಸ್ತಿಲಲ್ಲಿದೆ. ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊತ್ತುಕೊಳ್ಳಬೇಕು’ ಎಂದೂ ಪ್ರಧಾನಿ ಹೇಳಿದರು.

ಇದೇ ವೇಳೆ ಅವರು, ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ವಿಷಯಗಳ ಪದವಿ ಕೋರ್ಸ್‌ಗಳಿಗೆ ಚಾಲನೆ ನೀಡಿದರು.

ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.