ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ‌ಮೋದಿ‌ ಭೇಟಿ: ಬೊಮ್ಮ -ಬೆಳ್ಳಿ ಹೇಳಿದ್ದೇನು?

Last Updated 9 ಏಪ್ರಿಲ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿರುವ ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ಅವರನ್ನು ಭೇಟಿ ಮಾಡಿದ್ದರು.

ಆನೆ ಶಿಬಿರಕ್ಕೆ ಮೋದಿ ಭೇಟಿ ನೀಡಿದ್ದರ ಬಗ್ಗೆ ಬೊಮ್ಮ–ಬೆಳ್ಳಿ ದಂಪತಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರು ನಮ್ಮನ್ನು ಭೇಟಿ ಮಾಡಿದ್ದು ನಮಗೆ ಬಹಳ ಖುಷಿಯಾಗಿದೆ. ಮನೆ, ಕುಡಿಯುವ ನೀರು ಸೇರಿದಂತೆ ನಾವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಅವರು ಮಾಹಿತಿ ಪಡೆದರು. ನಮಗೆ ಇರಲು ಸೂಕ್ತವಾದ ಮನೆಯಿಲ್ಲ, ಆದ್ದರಿಂದ ಇಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಮನೆಗಳನ್ನು ಮತ್ತು ಆನೆಗಳಿಗೆ ಶಿಬಿರ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದೇವೆ. ಅವರು ಈಡೇರಿಸುವ ಭರವಸೆ ನೀಡಿದ್ದಾರೆ’ ಎಂದು ದಂಪತಿ ಹೇಳಿದ್ದಾರೆ.

ಬೊಮ್ಮ -ಬೆಳ್ಳಿ ಕಾವಾಡಿ ದಂಪತಿಯನ್ನು ಮಾತನಾಡಿಸಿದ ಮೋದಿ, ಆನೆ‌ ಮರಿಗಳನ್ನು‌ ಸಲಹುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. 'ದೆಹಲಿಗೆ ಬರುವಂತೆ ಹೇಳಿದ್ದರೂ ಯಾಕೆ ಬರಲಿಲ್ಲ' ಎಂದೂ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.

ಸಾಕ್ಷ್ಯಚಿತ್ರದಲ್ಲಿ‌ ಬರುವ ರಘು ಮತ್ತು ಅಮ್ಮು ಹೆಸರಿನ ಆನೆ ಮರಿಗಳಿಗೆ ಕಬ್ಬು ಕೊಟ್ಟು ಮೋದಿ ಸಂತಸ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT