ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆಯಬೇಕು. ಹಾಗಿದ್ದಲ್ಲಿ ಮಾತ್ರ ಭಾರತವನ್ನು ಕಟ್ಟಲು ಸಾಧ್ಯ. ತಮ್ಮ ತಪ್ಪುಗಳನ್ನು ನಿರಾಕರಿಸುವುದರಿಂದ ಏನೂ ಪರಿಹಾರ ಸಿಗುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕವಾಗಿ ಬಡತನ ಹೆಚ್ಚಾಗಿದ್ದು, ಇದರಲ್ಲಿ ಭಾರತ ಶೇಕಡ 57.3 ರಷ್ಟು ಪಾಲನ್ನು ಹೊಂದಿದೆ ಎಂದು ಉಲ್ಲೇಖಿಸಿರುವ ವಿಶ್ವಬ್ಯಾಂಕ್ನ ವರದಿಯೊಂದನ್ನು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

‘ಕೋವಿಡ್ ನಿರ್ವಹಣೆಯಲ್ಲಿ ಭಾರತ ಸರ್ಕಾರ ಎಡವಿದೆ. ಇದು ಅದರದ್ದೇ ಫಲಿತಾಂಶ. ಆದರೆ ನಾವು ಈಗ ಭವಿಷ್ಯದ ಮೇಲೆ ಗಮನಹರಿಸಬೇಕು. ಪ್ರಧಾನಿ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಸಾಂಕ್ರಾಮಿಕ ನಿರ್ವಹಣೆಗೆ ತಜ್ಞರ ಸಹಾಯವನ್ನು ಪಡೆಯಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.