ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆ ರಚನೆಕಾರ ದೇವ್‌ ಕೊಹ್ಲಿ ಅಸ್ತಂಗತ

Published 26 ಆಗಸ್ಟ್ 2023, 14:32 IST
Last Updated 26 ಆಗಸ್ಟ್ 2023, 14:32 IST
ಅಕ್ಷರ ಗಾತ್ರ

ಮುಂಬೈ: ಕವಿ ಹಾಗೂ ಗೀತೆ ರಚನೆಕಾರ ದೇವ್‌ ಕೊಹ್ಲಿ (81) ಅವರು ಶನಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕೆಲವು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರು ದಶಕಗಳ ಕಾಲದ ಬಾಲಿವುಡ್‌ನ ತಮ್ಮ ವೃತ್ತಿಬದುಕಿನಲ್ಲಿ ನೂರಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಗೀತೆಗಳನ್ನು ರಚಿಸಿರುವುದು ಅವರ ಹೆಗ್ಗಳಿಕೆಯಾಗಿದೆ. ಅವರು ರಚಿಸಿದ ಹಲವು ಹಾಡುಗಳು ಮ್ಯೂಸಿಕಲ್‌ ಸೂಪರ್‌ ಹಿಟ್‌ ಆಗಿವೆ.

‘ಮೈನೆ ಪ್ಯಾರ್‌ ಕಿಯಾ’, ‘ಬಾಜಿಗರ್‌’, ‘ಜುಡ್ವಾ 2’, ಮುಸಾಫಿರ್‌, ‘ಟ್ಯಾಕ್ಸಿ ನಂಬರ್‌ 911’ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಗೀತೆ ರಚನೆ ಮಾಡಿದ ಹಿರಿಮೆ ಅವರದಾಗಿದೆ. ಅವರು ರಚಿಸಿದ ‘ಮೈನೆ ಪ್ಯಾರ್‌ ಕಿಯಾ’ ಚಿತ್ರದ ‘ಕಬೂತರ್‌ ಜಾ ಜಾ ಜಾ’ ಹಾಡು ಇಂದಿಗೂ ಜನರ ಬಾಯಲ್ಲಿ ಗುನುಗುತ್ತಿದೆ.

ಪಾಕಿಸ್ತಾನದ ರಾವಲ್ಪಿಂಡಿಯ ಸಿಖ್‌ ಕುಟುಂಬದಲ್ಲಿ 1942ರ ನವೆಂಬರ್‌ 2ರಂದು ಅವರು ಜನಿಸಿದರು. ದೇಶ ವಿಭಜನೆ ಬಳಿಕ ಅವರ ಕುಟುಂಬವು ಡೆಹ್ರಾಡೂನ್‌ಗೆ ಬಂದು ನೆಲೆಸಿತ್ತು. ಅಲ್ಲಿನ ಶ್ರೀಗುರು ನಾನಕ್‌ ದೇವ್‌ ಗುರು ಮಹಾರಾಜ್‌ ಕಾಲೇಜಿನಲ್ಲಿ ಅವರು ವಿದ್ಯಾಭ್ಯಾಸ ಪೂರ್ಣಗೊಳಿಸಿದರು.  

1964ರಲ್ಲಿ ಉದ್ಯೋಗ ಅರಸಿ ಅವರು ಮುಂಬೈಗೆ ಕಾಲಿಟ್ಟರು. ಸಿನಿಮಾ ರಂಗ ಪ್ರವೇಶಿಸಿದ ಅವರಿಗೆ 1969ರಲ್ಲಿ ತೆರೆಕಂಡ ‘ಗುಂಡ’ ಸಿನಿಮಾ ವೃತ್ತಿಬದುಕಿಗೆ ಹೊಸದಿಕ್ಕು ನೀಡಿತು. ‘ಲಾಲ್ ಪತ್ಥರ್’ ಚಿತ್ರಕ್ಕೆ ಅವರು ರಚಿಸಿದ ‘ಗೀತ್ ಗಾತಾ ಹೂಂ ಮೈಂ’ ಹಾಡು ಹಿಟ್‌ ಆಯಿತು. ಇದಕ್ಕೆ ಗಾಯಕ ಕಿಶೋರ್‌ ಕುಮಾರ್‌ ಧ್ವನಿಯಾಗಿದ್ದರು. 

ಸಂಗೀತ ನಿರ್ದೇಶಕರಾದ ಶಂಕರ್‌–ಜೈಕಿಶನ್‌ರಿಂದ ಅನು ಮಲಿಕ್‌, ರಾಮ್‌–ಲಕ್ಷ್ಮಣ್‌ನಿಂದ ವಿಶಾಲ್‌–ಶೇಖರ್‌, ಆನಂದ್ ರಾಜ್‌ ಆನಂದ್‌, ಆನಂದ್‌–ಮಿಲಿಂದ ಅವರ ತಲೆಮಾರಿನ ಜೊತೆಗೆ ಕೊಹ್ಲಿ ಅವರು ಕೆಲಸ ನಿರ್ವಹಿಸಿದ ಹಿರಿಮೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT