ಜಮ್ಮು: ಬಿಜೆಪಿ ಹಿರಿಯ ನಾಯಕ ರಾಜೀವ್ ಜಸ್ರೊಟಿಯಾ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಲಾಗಿದೆ.

‘ರಾಷ್ಟ್ರಗೌರವಕ್ಕೆ ದಕ್ಕೆ ತಡೆ ಕಾಯ್ದೆಯ ಕಲಂ 2ರ ಅನ್ವಯ(ರಾಷ್ಟ್ರಧ್ವಜಕ್ಕೆ ಅಥವಾ ಸಂವಿಧಾನಕ್ಕೆ ಅಪಮಾನ) ಇಬ್ಬರು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸಿದ ಕುರಿತು ಸ್ಥಳೀಯ ನಿವಾಸಿ ವಿನೋದ್ ನಿಝಾವಾನ್ ಎಂಬುವವರು ದೂರು ದಾಖಲಿಸಿದ್ದು, ಜತೆಗೆ ವಿಡಿಯೊವನ್ನೂ ಸಲ್ಲಿಸಿದ್ದಾರೆ.

ಇದೇ 19ರಂದು ಬಿಜೆಪಿ ಅಭ್ಯರ್ಥಿ ರಾಹುಲ್ದೇವ್ ಶರ್ಮಾ ಅವರು ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶಿವನಗರದ ತಮ್ಮ ನಿವಾಸದಿಂದ ತೆರಳಿದ್ದ ವೇಳೆ ರ್ಯಾಲಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.