ಇನ್ನೊಂದೆಡೆ ದಕ್ಷಿಣ ಮುಂಬೈನ ಸಿಲ್ವರ್ ಓಕ್ ಬಳಿ ಇರುವ ಶರದ್ ಪವಾರ್ ಅವರ ಮನೆ ಹಾಗೂ ಎನ್‌ಸಿಪಿ ಕೇಂದ್ರ ಕಚೇರಿ ಯಶವಂತರಾವ್ ಚೌಹಾಣ್ ಸಭಾಂಗಣದ ಮುಂದೆ ನೆರದಿರುವ ಶರದ್ ಅವರ ಅಪಾರ ಅಭಿಮಾನಿಗಳು ‘83 ವರ್ಷದ ಯೋಧನ ಏಕಾಂಗಿ ಹೋರಾಟ’ ಎಂದು ಎನ್‌ಸಿಪಿ ನಾಯಕನನ್ನು ಸೈನಿಕನಿಗೆ ಹೋಲಿದ್ದಾರೆ.
ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಅವರು ಸಿಎಂ ಏಕನಾಥ್ ಶಿಂದೆ ಅವರಿಗೆ ಬೆಂಬಲ ನೀಡಿ ಡಿಸಿಎಂ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಈ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.
ಶರದ್ ಪವಾರ್ ಅವರು, ಅಜಿತ್‌ಗೆ ಎನ್‌ಸಿಪಿ ಕಾರ್ಯಕರ್ತರ, ಶಾಸಕರ ಬೆಂಬಲ ಇಲ್ಲ. ನಾನೊಬ್ಬನೇ ಹೋರಾಡಿ ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಗುಡುಗಿದ್ದಾರೆ.