2006ರಿಂದ 2016ರವರೆಗೆ ಭಾರತದಲ್ಲಿ 27.1 ಕೋಟಿ ಜನರ ಬಡತನ ಸಮಸ್ಯೆ ನಿವಾರಣೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಭಾರತದಲ್ಲಿಈ ಅವಧಿಯಲ್ಲಿ ಆಸ್ತಿ, ಅಡುಗೆ ಇಂಧನ, ನೈರ್ಮಲ್ಯ ಹಾಗೂ ಪೌಷ್ಟಿಕತೆಯಂತಹ ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಬಡತನ ಸೂಚ್ಯಂಕದಲ್ಲಿ ಏಕಾಏಕಿ ಇಳಿಕೆ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪೈಕಿ 88.6 ಕೋಟಿ ಜನ ಮಧ್ಯಮ ಆದಾಯದ ರಾಷ್ಟ್ರದಲ್ಲಿ ಬದುಕುತ್ತಿದ್ದಾರೆ. ಬಡತನ ಸಮಸ್ಯೆ ಇಳಿಮುಖವಾಗಿದೆ ಎನ್ನುವುದನ್ನು ಚಿತ್ರೀಕರಿಸಲು ಒಟ್ಟು 200 ಕೋಟಿ ಜನಸಂಖ್ಯೆಯುಳ್ಳ 10 ರಾಷ್ಟ್ರಗಳನ್ನು ವರದಿಯಲ್ಲಿ ಗುರುತಿಸಲಾಗಿದೆ.
ಬಡತನ ನಿರ್ಮೂಲನೆಯಲ್ಲಿ ಅಭಿವೃದ್ಧಿ ಸಾಧಿಸಿದ ದೇಶಗಳು ಬಾಂಗ್ಲಾದೇಶ, ಕಾಂಬೋಡಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇಥಿಯೋಪಿಯಾ, ಹೈಟಿ, ಭಾರತ, ನೈಜೀರಿಯಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ
* 2014ರಲ್ಲಿ 1.9 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.
* ಭಾರತದಲ್ಲಿ 2005–06ರಲ್ಲಿ 64 ಕೋಟಿ (ಶೇ 55.1)ಜನರು ಬಡತನದಲ್ಲಿದ್ದರು.
* 2015–16ರ ವೇಳೆಗೆ ಈ ಪ್ರಮಾಣ 36.9 ಕೋಟಿಗೆ (ಶೇ 27.9) ಇಳಿಕೆಯಾಗಿದೆ.
* ಎಂಪಿಐ ವರದಿಗೆ ಆದಾಯವೊಂದನ್ನೇ ಪರಿಗಣಿಸಿಲ್ಲ. ಆರೋಗ್ಯ ಸೌಲಭ್ಯ, ಪೌಷ್ಟಿಕತೆ, ನೈರ್ಮಲ್ಯ, ಶಿಶುಮರಣ ಪ್ರಮಾಣ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಸೂರು, ವಿದ್ಯಾಭ್ಯಾಸ, ಮುಂತಾದ ಸೂಚಕಗಳನ್ನು ಪರಿಗಣಿಸಲಾಗಿದೆ.