ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಪಾಸ್‌ಪೋರ್ಟ್‌: ಜಪಾನ್‌ ಹಿಂದಿಕ್ಕಿದ ಸಿಂಗಪುರ, ಭಾರತದ ಸ್ಥಾನ ಎಷ್ಟು...?

Published 19 ಜುಲೈ 2023, 11:30 IST
Last Updated 19 ಜುಲೈ 2023, 11:30 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಂತ ಪ್ರಬಲ ಪಾಸ್‌ಪೋರ್ಟ್‌ ಹೊಂದಿದ ರಾಷ್ಟ್ರಗಳಲ್ಲಿ ಸಿಂಗಾಪುರವು ಜಪಾನ್‌ ದೇಶವನ್ನು ಹಿಂದಿಕ್ಕುವ ಮೂಲಕ 192 ತಾಣಗಳಿಗೆ ವೀಸಾ ಇಲ್ಲದೇ ಪ್ರವೇಶಿಸುವ ಸೌಲಭ್ಯ ಪಡೆದಿದೆ. ಅದರಂತೆಯೇ ಭಾರತ 80ನೇ ಸ್ಥಾನಕ್ಕೇರುವ ಮೂಲಕ 5 ಹೊಸ ತಾಣಗಳಿಗೆ ವೀಸಾ ರಿಯಾಯಿತಿಯನ್ನು ಹೆಚ್ಚಿಸಿಕೊಂಡಿದೆ.

ಹೆನ್ಲೇ ಪಾಸ್‌ಪೋರ್ಟ್‌ ಇಂಡೆಕ್ಸ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಈ ಅಂಶಗಳಿವೆ. ಈವರೆಗೂ ಜಗತ್ತಿನ ಅತ್ಯಂತ ಶಕ್ತಿಯುತ ಪಾಸ್‌ಪೋರ್ಟ್‌ಗಾಗಿ ಜಪಾನ್‌ ಅಗ್ರಸ್ಥಾನದಲ್ಲಿತ್ತು. ಆದರೆ ಸಿಂಗಪುರ ಈಗ ಮೊದಲ ಸ್ಥಾನಕ್ಕೇರಿದೆ. ಆ ಮೂಲಕ 192 ರಾಷ್ಟ್ರಗಳಿಗೆ ವೀಸಾ ಇಲ್ಲದೆ ಪ್ರವೇಶ ಪಡೆಯುವ ಸೌಕರ್ಯ ಪಡೆದಿದೆ.

ಈ ಪಾಸ್‌ಪೋರ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ 80ನೇ ಸ್ಥಾನದಲ್ಲಿದೆ . ಭಾರತದ ಪಾಸ್‌ಪೋರ್ಟ್‌ ಹೊಂದಿರುವ ಪ್ರಯಾಣಿಕರು ಇಂಡೋನೇಷ್ಯಾ, ಥಾಯ್ಲೆಂಡ್‌, ರವಾಂಡಾ, ಜಮೈಕಾ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೆ ವೀಸಾ ಇಲ್ಲದೆ ಹಾಗೂ ಅಲ್ಲಿನ ದೇಶಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನೀಡುವ ಆನ್‌ ಅರೈವಲ್ ವೀಸಾ ಪಡೆಯುವ ಅವಕಾಶ ಹೊಂದಿದೆ. ಇದರಿಂದಾಗಿ ಭಾರತದ ಪಾಸ್‌ಪೋರ್ಟ್‌ ಹೊಂದಿರುವವರು 57 ರಾಷ್ಟ್ರಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಆದರೆ ಚೀನಾ, ಜಪಾನ್, ರಷ್ಯಾ, ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳು ಸೇರಿದಂತೆ 177 ರಾಷ್ಟ್ರಗಳಿಗೆ ಭಾರತೀಯರು ವೀಸಾ ಪಡೆದು ಪ್ರವೇಶಿಸಬೇಕಿದೆ. ಹೀಗಾಗಿ ಈ ಸೌಕರ್ಯ ಪಡೆದ ಟಾಗೊ ಹಾಗೂ ಸೆನೆಗಲ್ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಂತಿದೆ.

ಹೆನ್ಲೆ ಪಾಸ್‌ಪೋರ್ಟ್‌ ಇಂಡೆಕ್ಸ್‌ ಅನ್ನು ಡಾ. ಕ್ರಿಸ್ಟಿಯಾನ ಎಚ್. ಕೇಲಿನ್‌ ಅವರು ಆರಂಭಿಸಿದರು. ಈ ಪಟ್ಟಿಗೆ ಅಂತರರಾಷ್ಟ್ರೀಯ ವಾಯುಯಾನ ಪ್ರಾಧಿಕಾರ (ಐಎಟಿಎ) ನೀಡುವ ಮಾಹಿತಿಯನ್ನು ಆಧರಿಸಿದೆ. 199 ಪಾಸ್‌ಪೋರ್ಟ್‌ ಹಾಗೂ 227 ತಾಣಗಳನ್ನು ಇದು ಒಳಗೊಂಡಿದೆ.

ಈ ಬಾರಿಯ ಪಟ್ಟಿಯಲ್ಲಿ ಜಪಾನ್ ಮೂರನೇ ಸ್ಥಾನಕ್ಕೆ ಕುಸಿದಿದೆ. ದಶಕದ ಹಿಂದೆ ಸದಾ ಅಗ್ರಸ್ಥಾನದಲ್ಲಿರುತ್ತಿದ್ದ ಅಮೆರಿಕಾ ಈಗ 8ನೇ ಸ್ಥಾನಕ್ಕೆ ಕುಸಿದಿದೆ. ಬ್ರಿಟನ್ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಜರ್ಮನಿ, ಇಟಲಿ ಹಾಗೂ ಸ್ಪೇನ್ 2ನೇ ಸ್ಥಾನದಲ್ಲಿವೆ.

ಈ ಪಟ್ಟಿಯ ಕೊನೆಯ ಸ್ಥಾನದಲ್ಲಿ ಅಫ್ಗಾನಿಸ್ತಾನ ಇದೆ. ಈ ರಾಷ್ಟ್ರದ ಪಾಸ್‌ಪೋರ್ಟ್‌ ಹೊಂದಿರುವವರು ವೀಸಾ ಇಲ್ಲದೆ 27 ರಾಷ್ಟ್ರಗಳನ್ನು ಪ್ರವೇಶಿಸಬಹುದಾಗಿದೆ. ನೆರೆಯ ಪಾಕಿಸ್ತಾನ 100ನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕ್ರಮವಾಗಿ 95 ಹಾಗೂ 96ನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT