ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ನೋಟಿಸ್‌

ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಕೈ ಬಿಟ್ಟ ಸಂವಿಧಾನ ಪ್ರಸ್ತಾವನೆ
Published : 9 ಆಗಸ್ಟ್ 2024, 13:26 IST
Last Updated : 9 ಆಗಸ್ಟ್ 2024, 13:26 IST
ಫಾಲೋ ಮಾಡಿ
Comments

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ‘ಸಂವಿಧಾನ ಪ್ರಸ್ತಾವನೆ’ಯನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸದನದ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಅವರು ಹಕ್ಕುಚ್ಯುತಿ ನೋಟಿಸ್‌ ನೀಡಿದ್ದಾರೆ. 

ರಾಜ್ಯಸಭಾ ಸಭಾಪತಿ ಜಗದೀಪ್‌ ಧನ್‌ಕರ್‌ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿರುವ ಅವರು, ‘ಇದೇ ಆಗಸ್ಟ್‌ 7ರಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎನ್‌ಸಿಇಆರ್‌ಟಿಯ 3 ಹಾಗೂ 6ನೇ ತರಗತಿಯ ಪಠ್ಯಪುಸ್ತಕದಲ್ಲಿ ‘ಸಂವಿಧಾನದ ಪ್ರಸ್ತಾವನೆ’ ತೆಗೆದುಹಾಕಿದ ವಿಚಾರವನ್ನು ಸದನದಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ‘6ನೇ ತರಗತಿಯ ಪಠ್ಯಪುಸ್ತಕವು ‘ಸಂವಿಧಾನದ  ಪ್ರಸ್ತಾವನೆ’ಯನ್ನು ಒಳಗೊಂಡಿದೆ ಎಂದು ಉತ್ತರ ನೀಡಿದ್ದರು. ಅವರು ನೀಡಿದ ಸಮರ್ಥನೆಯು ವಾಸ್ತವಿಕವಾಗಿ ತಪ್ಪು ಹಾಗೂ ದಾರಿ ತಪ್ಪಿಸುವಂತಿದೆ’ ಎಂದು ಆಗಸ್ಟ್‌ 8ರಂದು ಧನಕರ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

‘ಇದಕ್ಕೆ ಸಂಬಂಧಿಸಿದಂತೆ ನಾನು 2022 ಹಾಗೂ 2024ರ 3 ಮತ್ತು 6ನೇ ತರಗತಿಯ ಪಠ್ಯಪುಸ್ತಕಗಳನ್ನು ಪತ್ರದ ಜೊತೆಗೆ ಕಳುಹಿಸಿದ್ದೇನೆ. 2022ರ ಪಠ್ಯಪುಸ್ತಕದಲ್ಲಿ ‘ಸಂವಿಧಾನದ ‍ಪ್ರಸ್ತಾವನೆ’ಯು ಒಳಗೊಡಿದೆ. 2024ರ ಪಠ್ಯಪುಸ್ತಕದಲ್ಲಿ ‘ಸಂವಿಧಾನದ ಪ್ರಸ್ತಾವನೆ’ ಕಾಣುತ್ತಿಲ್ಲ’ ಎಂದು ದಾಖಲೆ ಸಮೇತ ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT