ಮಿಡ್ನಾಪುರ್: ಪಶ್ಚಿಮ ಬಂಗಾಳದ ವ್ಯವಸಾಯ ನಗರಿ ಅಸಾನ್ಸೋಲ್ ಎಂಬಲ್ಲಿ ಗಂಡನಿಗಾಗಿ ಕಾಯುತ್ತಿದ್ದ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಬುಧವಾರ ರಾತ್ರಿ ತನ್ನ ಮನೆಯಲ್ಲಿ ಗಂಡನಿಗಾಗಿ ಕಾಯುತ್ತಿದ್ದ 28ರ ಹರೆಯದ ಗರ್ಭಿಣಿ ಮೇಲೆ ಮೂವರು ಅತ್ಯಾಚಾರವೆಸಗಿರುವುಗಾಗಿ ಪೊಲೀಸರು ಹೇಳಿದ್ದಾರೆ. ಈ ಮಹಿಳೆ ರಾತ್ರಿ ಹೊತ್ತುಮನೆಯಲ್ಲಿ ಒಂಟಿಯಾಗಿದ್ದಾಗಮೂರು ಜನ ದುಷ್ಕರ್ಮಿಗಳು ಬಂದು ಬಾಗಿಲು ತಟ್ಟಿದ್ದಾರೆ. ಮನೆಗೆ ಬಲವಂತವಾಗಿ ನುಗ್ಗಿದ ಇವರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ಮೊಟಾರ್ ಮೆಕ್ಯಾನಿಕ್ ಆಗಿರುವ ಪತಿ ಕೆಲಸ ಮುಗಿಸಿಮನೆಗೆ ಬಂದಾಗ ಹೆಂಡತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ ಎಂದಿದ್ದಾರೆ ಪೊಲೀಸರು.

ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರವೆಸಗಿದವರಲ್ಲಿ ಒಬ್ಬನ ಹೆಸರು ಕುಲದೀಪ್ ಸಿಂಗ್ ಎಂದಾಗಿದ್ದು, ಮತ್ತಿಬ್ಬರ ಬಗ್ಗೆ ಗೊತ್ತಿಲ್ಲ ಎಂದು ಸಂತ್ರಸ್ತೆ ಹೇಳಿರುವುದಾಗಿ ಅಸಾನ್ಸೋಲ್ ದುರ್ಗಾಪುರ್ ಪೊಲೀಸ್ ಆಯುಕ್ತ ಲಕ್ಷ್ಮೀ ನಾರಾಯಣ್ ಮೀನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.