ನವದೆಹಲಿ: ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್, ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅನಾವರಣಗೊಳಿಸಿದರು.

ವಸಾಹತುಶಾಹಿ ಕುರುಹುಗಳನ್ನು ತೊಡೆದುಹಾಕಲು ತೆಗೆದುಕೊಳ್ಳಲಾಗುತ್ತಿರುವ ಸರಣಿ ಕ್ರಮಗಳ ಭಾಗವಾಗಿ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಹೇಳಿದೆ.

ರಾಷ್ಟ್ರಪತಿ ಭವನದ ಅಶೋಕ ಮಂಟಪದ ಬಳಿಯಿರುವ ಭವ್ಯವಾದ ತೆರೆದ ಮೆಟ್ಟಿಲುಗಳಲ್ಲಿ ಇದ್ದ, ನವ ದೆಹಲಿಯ ಹಲವಾರು ಕಟ್ಟಡಗಳ ಪ್ರಮುಖ ವಾಸ್ತುಶಿಲ್ಪಿ ಎಡ್ವಿನ್ ಲಟ್ಯೆನ್ಸ್ ಅವರ ಪ್ರತಿಮೆಯನ್ನು ತೆರವುಗೊಳಿಸಿ, ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಇಡಲಾಗಿದೆ.

‘ವಸಾಹತುಶಾಹಿ ಮನಃಸ್ಥಿತಿಯ ಕುರುಹುಗಳನ್ನು ತೊಡೆದುಹಾಕಲು ಮತ್ತು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳಲು ಹಾಗೂ ಭಾರತಮಾತೆಗೆ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗೌರವಿಸಲು ತೆಗೆದುಕೊಳ್ಳುತ್ತಿರುವ ಸರಣಿ ಕ್ರಮಗಳ ಭಾಗವಾಗಿ ಪ್ರತಿಮೆ ಅನಾವರಣ ಮಾಡಲಾಗಿದೆ’ ಎಂದು ರಾಷ್ಟ್ರಪತಿ ಕಚೇರಿ ‘ಎಕ್ಸ್’ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.