ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇ-ರುಪಿ ಯನ್ನುಸೋಮವಾರ ಬಿಡುಗಡೆ ಮಾಡಿದರು. ‘ಇದು ವ್ಯಕ್ತಿ ಮತ್ತು ನಿಗದಿತ ಉದ್ದೇಶ ಸೂಚಿತ ಡಿಜಿಟಲ್ ಪಾವತಿ ವ್ಯವಸ್ಥೆ’ ಎಂದುಮೋದಿ ಹೇಳಿದರು.

‘ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳು ನೇರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವಂತೆ ಸರ್ಕಾರವು ಈಚಿನ ವರ್ಷಗಳಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇ-ರುಪಿ ಸಹ ಫಲಾನುಭವಿಗಳಿಗೆ ಸವಲತ್ತುಗಳು ಯಾವುದೇ ಸೋರಿಕೆಯಿಲ್ಲದೆ ತಲುಪು ವಂತೆ ಮಾಡುತ್ತದೆ’ ಎಂದು ಅವರು ಹೇಳಿದರು.

‘ಆರಂಭದಲ್ಲಿ ಇದನ್ನು ಆರೋಗ್ಯ ಸೇವೆಗಳಿಗೆ ಮಾತ್ರವೇ ಬಳಸಲಾಗುತ್ತದೆ. ನಂತರದ ದಿನಗಳಲ್ಲಿ ಸರ್ಕಾರದ ಇತರ ನೇರ ನಗದು ವರ್ಗಾವಣೆ (ಡಿಬಿಟಿ) ಕಾರ್ಯಕ್ರಮಗಳಿಗೂ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

‘ಸಂಘಸಂಸ್ಥೆಗಳೂ ತಾವು ಸಹಾಯ ಮಾಡುವ ಜನರಿಗೆ ನಗದು ನೀಡುವ ಬದಲಿಗೆ ಇ-ರುಪಿ ವೋಚರ್ ನೀಡಬಹುದು. ಆಗ ಆ ವ್ಯಕ್ತಿಯು, ಹಣ ನೀಡಿದ ಉದ್ದೇಶಕ್ಕೆ ಮಾತ್ರವೇ ಆ ಹಣವನ್ನು ಬಳಸಿಕೊಳ್ಳುವಂತೆ ಮಾಡಬಹುದು’ ಎಂದು ಮೋದಿ ಹೇಳಿದರು.

ಬಳಕೆ ಹೇಗೆ...

*ಇದೊಂದು ಡಿಜಿಟಲ್ ರೂಪದ ಪಾವತಿ ವ್ಯವಸ್ಥೆ. ಫಲಾನುಭವಿಗಳ ಮೊಬೈಲ್‌ಗೆ ಕ್ಯುಆರ್ ಕೋಡ್ ಅಥವಾ ಎಸ್‌ಎಂಎಸ್ ಆಧರಿತ ಇ-ವೋಚರ್ ರೂಪದಲ್ಲಿ ಇದನ್ನು ರವಾನಿಸಲಾಗುತ್ತದೆ

* ಸೇವಾದಾರರಿಗೆ ಶುಲ್ಕ ಪಾವತಿ ವೇಳೆ ಯಾವುದೇ ರೀತಿಯ ಡೆಬಿಟ್ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಷನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆಯೂ ಈ ಇ-ವೋಚರ್‌ಗಳನ್ನು ಬಳಸಬಹುದಾಗಿದೆ

* ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಒದಗಿಸಲು ಇ-ರುಪಿಯನ್ನು ಬಳಸಿಕೊಳ್ಳಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಲ್ಲಿ, ಕ್ಷಯ ನಿರ್ಮೂಲನೆ ಕಾರ್ಯಕ್ರಮ, ಆಯುಷ್ಮಾನ್ ಕಾರ್ಯಕ್ರಮ, ರಸಗೊಬ್ಬರಗಳ ಸಹಾಯಧನಗಳಲ್ಲಿ ಈ ಇ-ವೋಚರ್ ಅನ್ನು ಬಳಸಬಹುದಾಗಿದೆ

ಗೊಂದಲ: ನೇರ ನಗದು ವರ್ಗಾವಣೆ ಕಾರ್ಯಕ್ರಮಗಳಿಗೆ ಇ-ರುಪಿ ಯನ್ನು ವಿಸ್ತರಿಸಲಾಗುವುದು ಎಂದು ಪ್ರಧಾನಿ ಹೇಳಿ ದ್ದಾರೆ. ‘ಫಲಾನುಭವಿಗಳ ಮೊಬೈಲ್‌ಗಳಿಗೆ ಇ-ರುಪಿ ವೋಚರ್‌ಗಳನ್ನು ಕ್ಯುಆರ್ ಕೋಡ್ ಮತ್ತು ಎಸ್‌ಎಂಎಸ್ ವೋಚರ್ ರೂಪದಲ್ಲಿ ಕಳುಹಿಸಲಾಗುತ್ತದೆ. ವಿವಿಧ ಸೇವೆ ಪಡೆದುಕೊಳ್ಳುವಾಗ ಇವುಗಳನ್ನು ಬಳಸಿಕೊಳ್ಳಬಹುದು’ ಎಂದು ಪ್ರಧಾನಿ ಕಾರ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಭಾನುವಾರ ವಿವರಿಸಿತ್ತು.ಆದರೆ, ಯಾವ ಕಾರ್ಯಕ್ರಮದಲ್ಲಿ ಇ-ರುಪಿ ಬಳಕೆಯನ್ನು ಜಾರಿಗೆ ತರಲಾಗುವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಸಂಘಸಂಸ್ಥೆಗಳು ಇ-ರುಪಿಯನ್ನು ಖರೀದಿಸುವುದು ಅಥವಾ ಪಡೆದುಕೊಳ್ಳುವುದು ಎಲ್ಲಿ ಮತ್ತು ಹೇಗೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಸಾರ್ವಜನಿಕರು ಇದನ್ನು ಪಡೆದುಕೊಳ್ಳಬಹುದೇ ಇಲ್ಲವೇ ಎಂಬುದನ್ನು ಸಹ ಸರ್ಕಾರ ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.