ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ದಾಖಲಿಸುವ ವೇಳೆ ಪ್ರತಿಬಂಧಿಸಲಾಗಿರುವ ಸುಮಾರು 27 ಸಾವಿರ ಜನರ ಬಯೋಮೆಟ್ರಿಕ್‌ಗಳನ್ನು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅನುಷ್ಠಾನದ ವೇಳೆ ಮುಕ್ತಗೊಳಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಹೇಳಿದ್ದಾರೆ.

ಬಯೋಮೆಟ್ರಿಕ್ ಪ್ರತಿಬಂಧಕ್ಕೆ ಒಳಗಾಗಿರುವ ಆಧಾರ್ ಕಾರ್ಡ್‌ಗಳನ್ನು ತಡೆಹಿಡಿಯಲಾಗಿರುತ್ತದೆ. ಜೊತೆಗೆ, ಅಂಥವರು ಪಡಿತರ ಚೀಟಿ ಮತ್ತು ಉದ್ಯೋಗ ಪಡೆಯಲೂ ಸಮಸ್ಯೆ ಆಗುತ್ತದೆ ಎಂಬುದನ್ನು ಒಪ್ಪಿಕೊಂಡ ಶರ್ಮಾ ಅವರು, ಸದ್ಯದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದಿದ್ದಾರೆ.

ಅಖಿಲ ಅಸ್ಸಾಂ ವಿದ್ಯಾರ್ಥಿ ಪರಿಷತ್ (ಎಎಎಸ್‌ಯು) ಮತ್ತು ಸಂಬಂಧಪಟ್ಟ ಇತರರ ಜೊತೆ ಬಯೋಮೆಟ್ರಿಕ್‌ಗಳ ಪ್ರತಿಬಂಧ ತೆರವುಗೊಳಿಸುವ ಪ್ರಕ್ರಿಯೆ ಕುರಿತು ಚರ್ಚಿಸಲಾಗುತ್ತದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಈ ಕುರಿತು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಅವರು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬರಾಕ್ ಮತ್ತು ಬ್ರಹ್ಮಪುತ್ರ ಕಣಿವೆಯ ಸುಮಾರು 6 ಲಕ್ಷ ಮಂದಿ ಪೌರತ್ವ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ. ಕೆಲ ನಿರ್ದಿಷ್ಟ ವರ್ಗಗಳಿಗೆ ಸೇರಿದ 20 ಲಕ್ಷ ಮಂದಿಗೆ ಪೌರತ್ವ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.