ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಡಾಲ್ಫ್ ಹಿಟ್ಲರ್ನೊಂದಿಗೆ ಹೋಲಿಕೆ ಮಾಡಿದ ಆರೋಪಕ್ಕಾಗಿ ಹರಿಯಾಣದ ಒ.ಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಒಂದು ಸೆಮಿಸ್ಟರ್ ಅವಧಿಗೆ ಅಮಾನತು ಮಾಡಲಾಗಿದೆ.

ವಿದ್ಯಾರ್ಥಿಯ ತಂದೆ ಹರಿಯಾಣದ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ ನಂತರ ಅಮಾನತು ಮಾಡಲಾಗಿದೆ.

‘ಮಗ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದಾನೆ. ಆತನನ್ನು ಅವಮಾನಿಸಲಾಗುತ್ತಿದೆ ಮತ್ತು ತಾರತಮ್ಯ ಮಾಡಲಾಗುತ್ತಿದೆ. ಇದು ಆತನ ಮಾನಸಿಕ ಆರೋಗ್ಯ ಮತ್ತು ಓದಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಅವರು ದೂರಿದ್ದರು.

ಏನಿದು ಪ್ರಕರಣ: ಮೊದಲ ವರ್ಷದ ಪದವಿ ವಿದ್ಯಾರ್ಥಿ ವಿಖ್ಯಾತ್ ಬಜಾಜ್ ಅವರ ತಂದೆ ವಿಶಾವ್ ಬಜಾಜ್ ಅವರು ಕಳೆದ ವರ್ಷ ನವೆಂಬರ್ನಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ವಿಖ್ಯಾತ್ ‘ಉರಿ ಸರ್ಜಿಕಲ್ ದಾಳಿ’ ಕುರಿತು ಅಕ್ಟೋಬರ್ನಲ್ಲಿ ಪ್ರಬಂಧ ಬರೆದಿದ್ದ. ಇದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಇಷ್ಟವಾಗಿರಲಿಲ್ಲ. ನವೆಂಬರ್ 3ರಂದು ತರಗತಿಯಲ್ಲಿ ವಿಖ್ಯಾತ್ಗೆ ಕಿರುಕುಳ ನೀಡಲಾಗಿತ್ತು. ನವೆಂಬರ್ 7ರಂದು ‘ರಾಜಕೀಯ ಪ್ರಾತಿನಿಧ್ಯ’ ಕುರಿತು ಮಾತನಾಡುವಾಗ ಸಹಾಯಕ ಪ್ರಾಧ್ಯಾಪಕರು ಮೋದಿ ಕುರಿತು ಇಂಥ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.