ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಪಾಕ್‌ ಮೂಲದ 7 ಭಯೋತ್ಪಾದನೆ ನಿರ್ವಾಹಕರ ಆಸ್ತಿ ಜಪ್ತಿ

Published 7 ಮೇ 2024, 14:21 IST
Last Updated 7 ಮೇ 2024, 14:21 IST
ಅಕ್ಷರ ಗಾತ್ರ

ಶ್ರೀನಗರ(ಪಿಟಿಐ): ಪಾಕಿಸ್ತಾನದಲ್ಲಿದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ 7 ಜನರಿಗೆ ಸೇರಿದ, ಜಮ್ಮು–ಕಾಶ್ಮೀರದಲ್ಲಿರುವ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಾರಾಮುಲ್ಲಾ ನ್ಯಾಯಾಲಯದಿಂದ ಈ ಕುರಿತ ಆದೇಶವನ್ನು ಪಡೆದ ಬೆನ್ನಲ್ಲೇ, ಉಗ್ರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವರಿಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಗ್ರರ ನಿರ್ವಹಣೆ ಮಾಡುವವರನ್ನು, ಶಬ್ಬೀರ್‌ ಅಹ್ಮದ್‌ ಸೋಫಿ (ಶೇಖ್‌ಪುರ), ಗುಲಾಮ್‌ ನಬಿ ಅಲಾಯಿ (ವಾರಿಪೊರಾ ಪಾಯೀನ್‌), ಗುಲಾಮ್‌ ನಬಿ ಶೇಖ್‌ (ವಾರಿಪೊರಾ ಬಾಲಾ), ಶರೀಫ್‌ ಉದ್‌–ದೀನ್‌ ಚೋಪನ್‌ ಮತ್ತು ಗುಲ್ಲಾ ಶೇಖ್ (ರೇಶಿಪೊರಾ ಆಥೂರ), ಮೊಹಮ್ಮದ್ ರಫೀಕ್ ಖಾನ್‌ (ಸಲೂಸಾ) ಹಾಗೂ ಅಬ್ದುಲ್‌ ಹಮೀದ್‌ ಪರ‍್ರೆ (ಫ್ರಸ್ತಾರ್ ತಿಲ್ಗಾಂ) ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT