ಶ್ರೀಹರಿಕೋಟಾ(ಆಂಧ್ರಪ್ರದೇಶ): ಭೂ ಸರ್ವೇಕ್ಷಣೆಯ ಉದ್ದೇಶದಿಂದ ಉಡಾವಣೆ ಮಾಡಲಾಗಿದ್ದ ಪಿಎಸ್ಎಲ್ವಿ ರಾಕೆಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಕ್ಷೆ ಸೇರುವಲ್ಲಿ ಅದು ಭಾನುವಾರ ವಿಫಲವಾಯಿತು. ಇದು ಇಸ್ರೊದ 101ನೇ ಉಡ್ಡಯನವಾಗಿತ್ತು.

ಪೂರ್ವನಿಗದಿಯಂತೆ ಭಾನುವಾರ ಬೆಳಿಗ್ಗೆ 5.59ಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು. ‘ಒಟ್ಟು ನಾಲ್ಕು ಹಂತದಲ್ಲಿ ನಡೆಯುವ ಕಾರ್ಯಾಚರಣೆ ಇದಾಗಿತ್ತು. ಎರಡು ಹಂತಗಳವರೆಗೆ ಎಲ್ಲವೂ ಅಂದುಕೊಂಡಂತೆಯೇ ನಡೆಯಿತು. ಆದರೆ, ಮೂರನೇ ಹಂತದಲ್ಲಿ ಕಾರ್ಯಾಚರಣೆ ವಿಫಲವಾಯಿತು’ ಎಂದು ಇಸ್ರೊ ಹೇಳಿದೆ.

‘ಇನ್ನಷ್ಟು ಮೇಲೆ ಹೋಗಲು ರಾಕೆಟ್ನ ಎಂಜಿನ್ಗೆ ಬೇಕಾಗಿದ್ದ ಒತ್ತಡ ಸೃಷ್ಟಿಯಾಗಲಿಲ್ಲ. ಎಂಜಿನ್ಗೆ ಒತ್ತಡ ಸೃಷ್ಟಿಸಿಕೊಡಬೇಕಿದ್ದ ಇಂಧನ ಟ್ಯಾಂಕ್ನಲ್ಲಿಯೂ ಒತ್ತಡ ಸೃಷ್ಟಿಯಾಗಲಿಲ್ಲ. ಆದ್ದರಿಂದ ನೆಲಮಟ್ಟದಿಂದ 450 ಕಿ.ಮೀನಷ್ಟು ಎತ್ತರಕ್ಕೆ ಹಾರಿದ್ದ ರಾಕೆಟ್ ಸಮುದ್ರ ಸೇರಿತು’ ಎಂದಿದೆ.

‘ಮೂರನೇ ಹಂತದಲ್ಲಿ ಮೇಲೇರಲು ವಿಫಲವಾದ ರಾಕೆಟ್ನಲ್ಲಿ ಕಂಡುಬಂದ ಸಮಸ್ಯೆಯ ಕುರಿತು ವಿಶ್ಲೇಷಣೆ ಮಾಡಲಾಗುವುದು. ಈ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡಲಾಗುವುದು’ ಎಂದು ಇಸ್ರೊ ಅಧ್ಯಕ್ಷ ನಾರಾಯಣನ್ ಹೇಳಿದರು.

ಉಪಯೋಗ ಏನಿತ್ತು?

ಸಿಂಥೆಟಿಕ್ ಅಪಾರ್ಚರ್ ಪೇಲೋಡ್ (ಭೂಮಿಯ ಮೇಲ್ಮೈಯ ಅತ್ಯುನ್ನತ ಗುಣಮಟ್ಟದ ಚಿತ್ರ ತೆಗೆಯುವ ಉಪಕರಣ) ಅನ್ನು ಈ ಉಪಗ್ರಹದಲ್ಲಿ ಅಳವಡಿಸಲಾಗಿತ್ತು. ಈ ಉಪಕರಣವು ಎಲ್ಲ ಹವಾಮಾನದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿತ್ತು

ಕೃಷಿ ಅರಣ್ಯ ಪ್ರದೇಶಗಳ ಮೇಲೆ ನಿಗಾ ಇರಿಸುವುದು ವಿಪತ್ತು ನಿರ್ವಹಣೆ ನಗರಾಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಈ ಉಪಕರಣವು ಸಹಾಯಕವಾಗುತ್ತಿತ್ತು

ಅವಶೇಷ ಮುಕ್ತ ಬಾಹ್ಯಾಕಾಶ

ಈ ಕಾರ್ಯಾಚರಣೆಯಿಂದಾಗಿ ಬಾಹ್ಯಾಕಾಶದಲ್ಲಿ ಯಾವುದೇ ಅವಶೇಷಗಳು ಉಳಿಯದಂತೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಉಪಗ್ರಹಗಳ ಅವಧಿ ಮುಗಿದ ಬಳಿಕವೂ ಅದು ಕಕ್ಷೆಯಲ್ಲಿಯೇ ತಿರುಗುತ್ತಿರುತ್ತವೆ. ಆದರೆ ಕೆಲಸ ಮುಗಿದ ಬಳಿಕ ಎರಡು ವರ್ಷಗಳಲ್ಲಿ ಈ ಉಪಗ್ರಹವು ಸಮುದ್ರ ಸೇರುವಂತೆ ಈ ಕಾರ್ಯಾಚರಣೆಯಲ್ಲಿ ಪೂರ್ವ ನಿಗದಿ ಮಾಡಲಾಗಿತ್ತು. ಇದಕ್ಕಾಗಿ ಉಪಗ್ರಹದಲ್ಲಿ ಹೆಚ್ಚುವರಿ ಇಂಧನವನ್ನೂ ಇರಿಸಲಾಗಿತ್ತು.

ಘನ ಇಂಧನ ಎಂಜಿನ್ ವಿಫಲ

ಕಕ್ಷೆ ಸೇರುವ ಪ್ರಕ್ರಿಯೆಯ ಮೂರನೇ ಹಂತದಲ್ಲಿ ಘನಸ್ಥಿತಿಯಲ್ಲಿರುವ ಇಂಧನ ಮತ್ತು ದಹನಾನುಕೂಲಿ ಅನಿಲ ಮಿಶ್ರಣದಿಂದ ಕಾರ್ಯನಿರ್ವಹಿಸುವ ಎಂಜಿನ್ (ಸಾಲಿಡ್ ಮೋಟರ್ ಎಂಜಿನ್) ಬಳಸಲಾಗಿದೆ. ಈ ಎಂಜಿನ್ ಚಾಲೂ ಆದ ನಂತರ ಅದು ಅಗತ್ಯ ಪ್ರಮಾಣದಷ್ಟು ಶಕ್ತಿಯನ್ನು ಉತ್ಪಾದಿಸಲಿಲ್ಲ. ಹೀಗಾಗಿ ಕಾರ್ಯಾಚರಣೆ ಪೂರ್ಣಗೊಳ್ಳಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೊದ ಮಾಜಿ ಅಧ್ಯಕ್ಷ ಎಸ್. ಸೋಮನಾಥ ‘ಘನ ಇಂಧನ ಎಂಜಿನ್ ಅಭಿವೃದ್ಧಿಪಡಿಸುವಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸಲಾಗಿದೆ ಎಂಬುದು ತಿಳಿದಿದೆ. ಹಲವು ವೈಫಲ್ಯಗಳನ್ನೂ ಅನುಭವಿಸಿದ್ದೇವೆ. ಸಾಮಾನ್ಯವಾಗಿ ಇಂಥ ಹಂತದಲ್ಲಿ ಎಂಜಿನ್ ವಿಫಲವಾಗುವುದಿಲ್ಲ. ಅದೇನೆ ಇದ್ದರೂ ಈ ಬಾರಿ ಎದುರಿಸಿದ ಸಮಸ್ಯೆ ಏನು ಅದನ್ನು ಮೀರುವುದು ಹೇಗೆ ಎನ್ನುವ ಬಗ್ಗೆ ವಿಮರ್ಶೆ ನಡೆಯಲಿದೆ ಎಂಬ ವಿಶ್ವಾಸವಿದೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಮೂರನೇ ಬಾರಿಗೆ ಪಿಎಸ್ಎಲ್ವಿ ವಿಫಲ

ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ನಂಬಿಕಸ್ಥ ರಾಕೆಟ್ ಅಂದರೆ ಅದು ಪಿಎಸ್ಎಲ್ವಿ. ಆದರೆ ಭೂ ಸರ್ವೇಕ್ಷಣಾ ಉಪಗ್ರಹವನ್ನು ಕಕ್ಷಗೆ ಸೇರಿಸುವಲ್ಲಿ ಪಿಎಲ್ಎಲ್ವಿ ವಿಫಲವಾಗಿದೆ. ಅಭಿವೃದ್ಧಿಪಡಿಸಿದಾಗಿನಿಂದ ಇಲ್ಲಿಯವರೆಗೆ ಪಿಎಸ್ಎಲ್ವಿ ಅನ್ನು 63 ಬಾರಿ ಬಳಕೆ ಮಾಡಲಾಗಿದೆ. ಮೂರನೇ ಬಾರಿಗೆ ಈಗ ರಾಕೆಟ್ ವೈಫಲ್ಯ ಕಂಡಿದೆ. 1993 ಮತ್ತು 2017ರಲ್ಲಿಯೂ ಈ ರಾಕೆಟ್ ವಿಫಲವಾಗಿತ್ತು.

ಪ್ರಮುಖ ಅಂಶ:

111.64 ನಿಮಿಷ: ಉಡಾವಣೆಯಾಗಿ ಮೊದಲ ಹಂತ ಪೂರ್ಣಗೊಳ್ಳಲು ಇಸ್ರೊ ನಿಗದಿ ಮಾಡಿದ್ದ ಸಮಯ

110 ನಿಮಿಷ: ನಿಗದಿತ ಸಮಯಕ್ಕಿಂತ ಮೊದಲೇ ಮೊದಲನೇ ಹಂತ ಪೂರ್ಣಗೊಂಡ ಸಮಯ

264.34 ನಿಮಿಷ: ಉಡಾವಣೆಯಾಗಿ ಎರಡನೇ ಹಂತ ಪೂರ್ಣಗೊಳ್ಳಲು ಇಸ್ರೊ ನಿಗದಿ ಮಾಡಿದ್ದ ಸಮಯ

261.8 ನಿಮಿಷ: ನಿಗದಿತ ಸಮಯಕ್ಕಿಂತ ಮೊದಲೇ ಎರಡನೇ ಹಂತ ಪೂರ್ಣಗೊಂಡ ಸಮಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.