ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವ್‌ ಛಡ್ಡಾ ಮೇಲೆ ಕಾಗೆ ದಾಳಿ; ಬಿಜೆಪಿ ವ್ಯಂಗ್ಯಕ್ಕೆ ಸಂಸದನ ತಿರುಗೇಟು

Published 26 ಜುಲೈ 2023, 12:11 IST
Last Updated 26 ಜುಲೈ 2023, 12:11 IST
ಅಕ್ಷರ ಗಾತ್ರ

ನವದೆಹಲಿ : ಸಂಸತ್‌ ಭವನದ ಆವರಣದೊಳಗೆ ಫೋನ್‌ನಲ್ಲಿ ಮಾತನಾಡುತ್ತಿರುವ ವೇಳೆ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಮೇಲೆ ಕಾಗೆಯೊಂದು ದಾಳಿ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಛಡ್ಡಾ ಮೇಲೆ ಕಾಗೆ ದಾಳಿಯಾಗಿರುವುದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.

ಕೈಯಲ್ಲಿ ಫೈಲ್‌ ಹಿಡಿದು ನಿಂತಿರುವ ರಾಘವ್‌ ಛೆಡ್ಡಾ ಫೋನ್‌ ಕರೆಯಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಕಾಗೆಯೊಂದು ಛಡ್ಡಾ ಅವರ ಮೇಲೆ ದಾಳಿ ಮಾಡಿದೆ. ಕಾಗೆ ದಾಳಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಗೆ ದಾಳಿಯ ಫೋಟೋಗಳನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಛಡ್ಡಾ ಅವರ ಕಾಲೆಳೆದಿದೆ. 'ಸುಳ್ಳುಗಾರನನ್ನು ಕಾಗೆ ಕಚ್ಚುತ್ತದೆ ಎಂಬ ಮಾತನ್ನು ನಾವು ಕೇಳಿದ್ದೇವು. ಇದೀಗ ನೋಡುತ್ತಿದ್ದೇವೆ' ಎಂದು ಬರೆದುಕೊಂಡಿದೆ.

ಬಿಜೆಪಿಯ ಟ್ವೀಟ್‌ಗೆ ತಿರುಗೇಟು ನೀಡಿರುವ ಛಡ್ಡಾ, ಶ್ರೀರಾಮಚಂದ್ರನ ಮಾತನ್ನು ಉಲ್ಲೇಖಿಸಿದ್ದಾರೆ. 'ಕಲಿಯುಗದಲ್ಲಿ ಹಂಸವು ಧಾನ್ಯಗಳನ್ನು ತಿನ್ನುತ್ತದೆ, ಕಾಗೆಗಳು ಮುತ್ತುಗಳನ್ನು ತಿನ್ನುತ್ತವೆ ಎಂಬ ಮಾತನ್ನು ಶ್ರೀರಾಮಚಂದ್ರ ಸೀತೆಗೆ ಹೇಳುತ್ತಾನೆ. ಇಲ್ಲಿಯವರೆಗೆ ನೀವು ಈ ಮಾತನ್ನು ಕೇಳಿದ್ದಿರಿ, ಈಗ ಕಣ್ಣಾರೆ ನೋಡಿದ್ದೀರಿ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT