ನವದೆಹಲಿ: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ರೆಜಿಲ್, ಕೊಲಂಬಿಯಾ ಸೇರಿ ದಕ್ಷಿಣ ಅಮೆರಿಕದ ನಾಲ್ಕು ದೇಶಗಳಿಗೆ ಭೇಟಿ ನೀಡಲು ತೆರಳಿದರು’ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ. ಆದರೆ, ರಾಹುಲ್ ಅವರು ಎಷ್ಟು ದಿನಗಳವರೆಗೆ ಈ ದೇಶಗಳಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿಲ್ಲ.

ಈ ಬಗ್ಗೆ ಪಕ್ಷದ ಮಾಧ್ಯಮ ಮತ್ತು ಪ್ರಸಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ರಾಹುಲ್ ಮಾತುಕತೆ ನಡೆಸಲಿದ್ದಾರೆ. ಜೊತೆಗೆ, ನಾಲ್ಕು ದೇಶಗಳಲ್ಲಿ ಆಯಾ ದೇಶಗಳ ರಾಜಕೀಯ ನಾಯಕರೊಂದಿಗೂ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಭಾರತದೊಂದಿಗಿನ ಆಯಾ ದೇಶಗಳ ಪ್ರಜಾಪ್ರಭುತ್ವ ಮತ್ತು ರಾಜತಾಂತ್ರಿಕ ಸಂಬಂಧವನ್ನು ಗಟ್ಟಿಗೊಳಿಸಲಿದ್ದಾರೆ’ ಎಂದು ಖೇರಾ ಹೇಳಿದ್ದಾರೆ.

‘ಅಮೆರಿಕವು ಭಾರತದ ಮೇಲೆ ಸುಂಕ ಹೇರಿದ ಕಾರಣದಿಂದ ದೇಶವು ತನ್ನ ವ್ಯಾಪಾರ ಸಂಬಂಧಕ್ಕಾಗಿ ಇತರ ದೇಶಗಳ ಹುಡುಕಾಟದಲ್ಲಿ ಇರುವ ಈ ಹೊತ್ತಿನಲ್ಲಿ ರಾಹುಲ್ ಅವರು ದಕ್ಷಿಣ ಅಮೆರಿಕದ ಈ ನಾಲ್ಕು ದೇಶಗಳ ಉದ್ಯಮಿಗಳೊಂದಿಗೆ ಮಾತನಾಡಲಿದ್ದಾರೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.