ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಕಮಾಂಡರ್‌ ಇನ್‌ ಥೀಫ್‌’–ಹೀಗೆಂದು ಮೋದಿಗೆ ಹೀಗಳೆದ ರಾಹುಲ್‌ ಗಾಂಧಿ

Last Updated 24 ಸೆಪ್ಟೆಂಬರ್ 2018, 12:33 IST
ಅಕ್ಷರ ಗಾತ್ರ

ಬೆಂಗಳೂರು: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಈಗ ‘ಭಾರತದ ಕಮಾಂಡರ್‌ ಇನ್‌ ಥೀಫ್‌’ ಎಂದು ಟ್ವೀಟ್‌ನಲ್ಲಿ ಅಣಕಿಸಿದ್ದಾರೆ.

ಫ್ರಾನ್ಸ್‌ನ ಯೂಟೂಬ್‌ ಚಾನಲ್‌ ಬ್ರೂಟ್‌ ಒರಿಜಿನಲ್‌ನ ವರದಿಯನ್ನು ಶೇರ್‌ ಮಾಡಿ, ‘ಭಾರತದ ಕಮಾಂಡರ್‌ ಇನ್‌ ಥೀಫ್‌’ ಕುರಿತ ಕಹಿ ಸತ್ಯ ಎಂದು ಬರೆದುಕೊಂಡಿದ್ದಾರೆ. ಒಲಾಂಡ್‌ ಅವರೊಂದಿಗೆ ನಡೆಸಿರುವ ಸಂದರ್ಶನ ಆಯ್ದ ಭಾಗವೂ ಆ ವಿಡಿಯೊದಲ್ಲಿದೆ.

ಇದಲ್ಲದೆ ಇತ್ತೀಚೆಗೆ ರಾಜಸ್ಥಾನದಲ್ಲ ನಡೆದ ಚುನಾವಣ ಪೂರ್ವ ರ್‍ಯಾಲಿಯಲ್ಲಿ ರಾಹುಲ್‌ ಗಾಂಧಿ ಹೊಸದೊಂದು ಸ್ಲೋಗಲ್‌ ಉವಾಚಿಸಿದ್ದರು. ‘ಗಲಿ ಗಲಿ ಮೆ ಶೋರ್‌ ಹೈ, ಹಿಂದುಸ್ತಾನ್‌ ಕಾ ಚೌಕಿದಾರ್‌ ಚೋರ್‌ ಹೈ’ (ಗಲ್ಲಿ ಗಲ್ಲಿಯಲ್ಲೂ ಕೇಳಿಬರುತ್ತಿದೆ, ಹಿಂದೂಸ್ತಾನದ ನಾಯಕ ಕಳ್ಳ ಎಂಬ ಮಾತು). ಹೀಗೆ, ರಪೇಲ್‌ ಒಪ್ಪಂದ ಬಗ್ಗೆ ರಾಹುಲ್‌ ಗಾಂಧಿ ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT