ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಕೋಚ್‌: ಕೈಗೆಟುಕುವ ದರದಲ್ಲಿ ಊಟ

Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಅಕ್ಷರ ಗಾತ್ರ

ನವದೆಹಲಿ: ಸಾಮಾನ್ಯ ಕೋಚ್‌ಗಳ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಊಟ ಮತ್ತು ಕುಡಿಯುವ ನೀರನ್ನು ಒದಗಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸಾಮಾನ್ಯ ಕೋಚ್‌ಗಳಿಗೆ ಹೊಂದಿಕೆಯಾಗುವ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಆಹಾರ ಪೂರೈಸುವ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಇಲ್ಲಿ ನೀಡಲಾಗುವ ಊಟವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ‘ಟೈಪ್‌ ಒನ್‌’ ಊಟವು ₹ 20 ಬೆಲೆಯದ್ದಾಗಿದ್ದು, ಏಳು ಪೂರಿಗಳು, ಒಣ ಆಲೂ ಸಬ್ಜಿ ಮತ್ತು ಉಪ್ಪಿನಕಾಯಿ ಒಳಗೊಂಡಿರುತ್ತದೆ. ‘ಟೈಪ್‌ ಟು’ ಊಟ ₹ 50 ಬೆಲೆಯದ್ದಾಗಿದ್ದು, ಅನ್ನ, ರಾಜ್ಮಾ, ಚೋಲೆ, ಖಿಚಡಿ, ಕುಲ್ಚಾ, ಭತುರಾ, ಪಾವ್‌– ಬಾಜಿ, ಮಸಾಲೆ ದೋಸೆ ಸೇರಿದಂತೆ ಕೆಲ ದಕ್ಷಿಣ ಭಾರತದ ಆಹಾರವನ್ನು ಒಳಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT