ಜೈಪುರ: ಪಕ್ಷದ ಶಾಸಕಾಂಗ ಸಭೆಗೆ ಗೈರಾದರು ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಬಂಡಾಯ ಮುಖಂಡ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರಿಗೆ ಸಭಾಧ್ಯಕ್ಷರು ಅನರ್ಹತೆಯ ನೋಟಿಸ್ ಜಾರಿ ಮಾಡಿರುವುದನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಆಗ್ರಹದ ಮೇರೆಗೆ ರಾಜಸ್ಥಾನದ ಸಭಾಧ್ಯಕ್ಷರು ಅನರ್ಹತೆಯ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಶುಕ್ರವಾರದೊಳಗೆ ಉತ್ತರಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ‘ಶಾಸಕಾಂಗ ಸಭೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಅನರ್ಹತೆಯ ನೋಟಿಸ್ ನೀಡಿದ್ದಾರೆ. ಇದು ಕಾರಣವೇ ಅಲ್ಲ. ವಿಧಾನಸಭೆ ಸಭಾಧ್ಯಕ್ಷರ ದುರುದ್ದೇಶವನ್ನು ತೋರಿಸುತ್ತದೆ. ಸಾಂವಿಧಾನಿಕ ಮಿತಿ ಮೀರದಂತೆ ಬಿಜೆಪಿ ನೋಡಿಕೊಳ್ಳಲಿದೆ’ ಎಂದರು.

ಪಕ್ಷದವಿಪ್ ಉಲ್ಲಂಘನೆಯಾದಲ್ಲಿ ಮಾತ್ರ ಸಭಾಧ್ಯಕ್ಷರು ಶಾಸಕರ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಗುಲಾಬ್ ಚಂದ್ ಕಠಾರಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.