ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ:ಪತ್ನಿಯನ್ನು ಬೈಕ್‌ಗೆ ಕಟ್ಟಿ ಗ್ರಾಮದುದ್ದಕ್ಕೂ ಎಳೆದೊಯ್ದಿದ್ದ ಪತಿ ಬಂಧನ

Published 13 ಆಗಸ್ಟ್ 2024, 7:36 IST
Last Updated 13 ಆಗಸ್ಟ್ 2024, 7:36 IST
ಅಕ್ಷರ ಗಾತ್ರ

ಜೈಪುರ: ಮದ್ಯದ ಅಮಲಿನಲ್ಲಿ ತನ್ನ ಪತ್ನಿಯನ್ನು ಥಳಿಸಿ, ಆಕೆಯನ್ನು ಬೈಕ್‌ಗೆ ಕಟ್ಟಿಕೊಂಡು ಗ್ರಾಮದುದ್ದಕ್ಕೂ ಎಳೆದೊಯ್ದಿರುವ ಘಟನೆ ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬೈಕ್‌ಗೆ ಮಹಿಳೆಯನ್ನು ಕಟ್ಟಿ, ಆಕೆಯನ್ನು ರಸ್ತೆಯ ಮೇಲೆ ಎಳೆದೊಯ್ಯುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಂಚೌಡಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಪ್ರೇಮರಾಮ್ ಮೇಘವಾಲ್ (32) ಎಂದು ಗುರುತಿಸಲಾಗಿದೆ.

ಇದೀಗ ಸಂತ್ರಸ್ತ ಮಹಿಳೆಯು ಆಕೆಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಮೇಘವಾಲ್ ಆಕೆಯನ್ನು ಪ್ರತಿನಿತ್ಯ ಥಳಿಸುತ್ತಿದ್ದ. ಆಕೆಯನ್ನು ಗ್ರಾಮದ ಯಾರ ಜತೆಯೂ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ನೆರೆಹೊರೆಯವರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT