ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics| ಕ್ರೀಡಾಪಟುಗಳ ತಪಾಸಣೆ; ತಿಗಣೆ ತಡೆಗೆ ಶ್ವಾನ ನಿಯೋಜಿಸಿದ ಕೊರಿಯಾ

Published : 13 ಆಗಸ್ಟ್ 2024, 4:31 IST
Last Updated : 13 ಆಗಸ್ಟ್ 2024, 4:31 IST
ಫಾಲೋ ಮಾಡಿ
Comments

ಇಂಚೆನ್: ‍ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮರಳುತ್ತಿರುವ ತನ್ನ ದೇಶದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅಭಿಮಾನಿಗಳ ಸರಂಜಾಮುಗಳೊಂದಿಗೆ ತಿಗಣೆಗಳು ಬರುವ ಸಾಧ್ಯತೆ ಇದೆ. ಅವುಗಳನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದಲ್ಲಿ ಸರಂಜಾಮುಗಳ ಪರಿಶೀಲನೆಗೆ ಶ್ವಾನವನ್ನು ನಿಯೋಜಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ. 

ಬೀಗಲ್ ತಳಿಯ ಎರಡು ವರ್ಷದ ನಾಯಿ ಕೆಕೊ ಈ ಕಾರ್ಯಕ್ಕೆ ನಿಯೋಜನೆಗೊಂಡಿದೆ. ತಿಗಣೆಗಳ ದೇಹದಿಂದ ಹೊರಸೂಸುವ ಫೆರಮೋನ್‌ಗಳ ವಾಸನೆಯನ್ನು ಗ್ರಹಿಸುವ ತರಬೇತಿ ಪಡೆದ ದೇಶದ ಏಕೈಕ ನಾಯಿ ಕೆಕೊ. ಹೊಟೇಲ್‌ನ ಒಂದು ಕೊಠಡಿಯನ್ನು ಇದು ಕೇವಲ ಎರಡು ನಿಮಿಷಗಳಲ್ಲಿ ತಪಾಸಣೆ ನಡೆಸುವಷ್ಟರ ಮಟ್ಟಿಗೆ ಚುರುಕಾಗಿದೆ ಎಂದು ಸೆಸ್ಕೊ ಎಂಬ ಕೀಟನಿಯಂತ್ರಕ ಕಂಪನಿ ಹೇಳಿದೆ.

ಈ ಕೀಟನಿಯಂತ್ರಕ ಕಂಪನಿ ಯೊಂದಿಗೆ ದಕ್ಷಿಣ ಕೊರಿಯಾದ ಭದ್ರತೆ ಹಾಗೂ ಸಾರಿಗೆ ಸಚಿವಾಲಯವೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇವರೊಂದಿಗೆ ರೋಗ ನಿಯಂತ್ರಕ ಮತ್ತು ಮುಂಜಾಗ್ರತಾ ಏಜೆನ್ಸಿ, ಇಂಚೆನ್‌ ಏರ್‌ಲೈನ್ಸ್‌ ಮತ್ತು ವಿಮಾನ ನಿಲ್ದಾಣಗಳು ಕೈಜೋಡಿಸಿವೆ. ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರತಿಯೊಬ್ಬರ ತಪಾಸಣೆ ನಡೆಸಲಾಗುವುದು.

ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ತಿಗಣೆ ಕಾಟದ ಕುರಿತು ಫ್ಯ್ರಾನ್ಸ್‌ ರಾಷ್ಟ್ರದಾದ್ಯಂತ ಆತಂಕ ವ್ಯಕ್ತವಾಗಿತ್ತು. ಇವು ದೇಶವ್ಯಾಪಿ ಹರಡುವ ಭೀತಿಯನ್ನು ವ್ಯಕ್ತಪಡಿಸಿದ್ದ ಫ್ರಾನ್ಸ್‌, ಇವುಗಳ ನಿರ್ಮೂಲನೆಗೆ ಅಭಿಯಾನ ನಡೆಸಿತ್ತು.

‘ಒಲಿಂಪಿಕ್ಸ್‌ಗಾಗಿ ಜಗತ್ತಿನ ಹಲವು ರಾಷ್ಟ್ರಗಳಿಂದ ಪ್ಯಾರಿಸ್‌ಗೆ ಜನರು ಬಂದಿದ್ದರು. ಹೀಗೆ ಬಂದವರ ಸಾಮಗ್ರಿಗಳೊಂದಿಗೆ ತಿಗಣೆಗಳೂ ಸೇರಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಇವುಗಳು ದೇಶ ಪ್ರವೇಶಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ದಕ್ಷಿಣ ಕೊರಿಯಾ ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಕೆಕೊ ಹಾಗೂ ಅದರ ತಂಡ ಶುಕ್ರವಾರವೇ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಪ್ಯಾರಿಸ್‌ನಿಂದ ಮರಳುತ್ತಿರುವ ಕ್ರೀಡಾಪಟುಗಳು, ತರಬೇತುದಾರರ ತಪಾಸಣೆ ನಡೆಸುತ್ತಿದೆ. ಇದು ಸೆ. 8ರವರೆಗೂ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಈ ಬಾರಿ 144 ಅಥ್ಲೀಟ್‌ಗಳನ್ನು ಕಳುಹಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT