ಸಚಿವರ ಕಾರ್ಯಕ್ಷಮತೆ ಆಧಾರವಾಗಿಟ್ಟು ಕೆಲವರನ್ನು ಕೈಬಿಡಲು ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ. ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಸಾಧಿಸಿರುವ ಪ್ರಗತಿಯ ವರದಿಯನ್ನು ಈಗಾಗಲೇ ತರಿಸಿಕೊಂಡಿರುವ ಹೈಕಮಾಂಡ್ ನಾಯಕರು, ವರ್ಷಾಂತ್ಯದೊಳಗೆ ಸಂಪುಟ ಪುನರ್ ರಚನೆ ಮಾಡುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.