ಗುನಾ ಜಿಲ್ಲೆಯ ಖತೋಲಿ ಗ್ರಾಮದ ಪಡಿತರ ಅಂಗಡಿಯೊಂದರ ಬಳಿ ಅನುಮಾನಾಸ್ಪಾದ ಚೀಲಗಳು ಕಂಡು ಬಂದಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಚೀಲಗಳನ್ನು ಪರಿಶೀಲಿಸಿದಾಗ ಮಹಿಳೆಯ ಮೃತದೇಹದ ಭಾಗಗಳು ಮೂರು ಚೀಲಗಳಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪತ್ತೆಯಾಗಿರುವ ಚೀಲಗಳನ್ನು ಗಮನಿಸಿದಾಗ ಕೆಲವೇ ಗಂಟೆಗಳ ಹಿಂದೆಯಷ್ಟೇ ಕೊಲೆ ನಡೆದಿದೆ. ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಚಂಚೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ದಿವ್ಯಾ ರಾಜವತ್ ಹೇಳಿದ್ದಾರೆ.