ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ನಾಯಕನಾಗಿ ರಾಘವ್ ಚಡ್ಡಾ: ಎಎಪಿ ಮನವಿ ತಿರಸ್ಕರಿಸಿದ ಸಭಾಪತಿ

Published 29 ಡಿಸೆಂಬರ್ 2023, 9:13 IST
Last Updated 29 ಡಿಸೆಂಬರ್ 2023, 9:13 IST
ಅಕ್ಷರ ಗಾತ್ರ

ನವದೆಹಲಿ: ಮೇಲ್ಮನೆಯಲ್ಲಿ ಪಕ್ಷದ ಹಂಗಾಮಿ ನಾಯಕನಾಗಿ ರಾಘವ್‌ ಚಡ್ಡಾ ಅವರನ್ನು ನೇಮಕ ಮಾಡುವ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಮನವಿಯನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ತಿರಸ್ಕರಿಸಿದ್ದಾರೆ.

ಈ ಬಗ್ಗೆ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಧನಕರ್ ಅವರು, ‘ಇದು ಸಂಸತ್ತಿನ ಕಾಯಿದೆಯಲ್ಲಿ ಮಾನ್ಯತೆ ಪಡೆದ ಪಕ್ಷಗಳು ಹಾಗೂ ಗುಂಪುಗಳ ನಾಯಕರು ಮತ್ತು ಮುಖ್ಯ ಸಚೇತಕರ ಕಾಯ್ದೆ –1998 ಹಾಗೂ ಅದರಡಿ ರೂ‍ಪಿಸಲಾಗಿರುವ ನಿಯಮಗಳಲ್ಲಿ ಬರುತ್ತದೆ. ನಿಮ್ಮ ಮನವಿಯು ಅನ್ವಯವಾಗುವ ಕಾನೂನಿಗೆ ಒಳಪಟ್ಟಿಲ್ಲ. ಹೀಗಾಗಿ ಅದನ್ನು ಅಂಗೀಕರಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ಸಂಜಯ್‌ ಸಿಂಗ್ ಅವರ ಬದಲಿಗೆ ರಾಜ್ಯಸಭೆಯಲ್ಲಿ ‍ಪಕ್ಷದ ಹಂಗಾಮಿ ನಾಯಕನಾಗಿ ರಾಘವ್ ಚಡ್ಡಾ ಅವರನ್ನು ನೇಮಕ ಮಾಡಬೇಕು ಎಂದು ಕೋರಿ ಈ ತಿಂಗಳ ಆರಂಭದಲ್ಲಿ ಕೇಜ್ರಿವಾಲ್ ಅವರು ಧನಕರ್ ಅವರಿಗೆ ಪತ್ರ ಬರೆದಿದ್ದರು.

ಅವರ ಮನವಿ ತಿರಸ್ಕಾರಗೊಂಡಿದ್ದರಿಂದ ಸಂಜಯ್‌ ಸಿಂಗ್ ಅವರೇ ರಾಜ್ಯಸಭೆಯಲ್ಲಿ ಎಎ‍ಪಿಯ ನಾಯಕನಾಗಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT