ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕದ ಐತಿಹಾಸಿಕ ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮಮಂದಿರ ಪ್ರತಿಕೃತಿ

Published 3 ಜುಲೈ 2024, 5:41 IST
Last Updated 3 ಜುಲೈ 2024, 5:41 IST
ಅಕ್ಷರ ಗಾತ್ರ

ವಾಷಿಂಗ್ಟನ್: ಆಗಸ್ಟ್ 18 ರಂದು ಅಮೆರಿಕದಲ್ಲಿ ನಡೆಯಲಿರುವ ಐತಿಹಾಸಿಕ ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ.

ಪರೇಡ್‌ನಲ್ಲಿ ನ್ಯೂಯಾರ್ಕ್ ಮತ್ತು ಇತರೆಡೆ ವಾಸವಿರುವ ಸಾವಿರಾರು ಮಂದಿ ಭಾರತೀಯರು ಭಾಗವಹಿಸಲಿದ್ದಾರೆ.

18 ಅಡಿ ಉದ್ದ, 9 ಅಡಿ ಅಗಲ ಮತ್ತು 8 ಅಡಿ ಎತ್ತರದ ರಾಮಮಂದಿರದ ಪ್ರತಿಕೃತಿ ಇದಾಗಿದೆ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್‌ನ(ವಿಎಚ್‌ಪಿಎ) ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ರಾಮಮಂದಿರ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತಿದೆ.

ದೇಶದ ಹೊರಗೆ ಭಾರತದ ಸ್ವಾತಂತ್ರ್ಯ ಸಂಭ್ರಮಾಚರಣೆಯಾದ ವಾರ್ಷಿಕ ‘ಇಂಡಿಯಾ ಡೇ’ ಪರೇಡ್ ಕಾರ್ಯಕ್ರಮವು ಇದಾಗಿದೆ. 1,50,000 ಲಕ್ಷ ಭಾರತೀಯರು ಪರೇಡ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ನ್ಯೂಯಾರ್ಕ್‌ನ ಪೂರ್ವ 38ನೇ ಸ್ಟ್ರೀಟ್‌ನಿಂದ ಪೂರ್ವ 27ನೇ ಸ್ಟ್ರೀಟ್‌ವರೆಗೆ ವಾರ್ಷಿಕ ಪರೇಡ್ ನಡೆಯುತ್ತದೆ.

ವಿಎಚ್‌ಪಿಎ ಇತ್ತೀಚೆಗೆ ರಾಮಮಂದಿರ ರಥಯಾತ್ರೆಯನ್ನು ಆಯೋಜಿಸಿತ್ತು. 60 ದಿನಗಳ ಕಾಲ ನಡೆದ ಈ ಯಾತ್ರೆಯಲ್ಲಿ 48 ರಾಜ್ಯಗಳ 851 ದೇವಸ್ಥಾನಗಳಿಗೆ ಭೇಟಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT