ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಪೊಲೀಸ್‌ ಠಾಣೆಗೆ ಅನುರಾಗ್‌ ಕಶ್ಯಪ್‌ ಹಾಜರು

Last Updated 1 ಅಕ್ಟೋಬರ್ 2020, 7:26 IST
ಅಕ್ಷರ ಗಾತ್ರ

ಮುಂಬೈ: ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಅವರು ಗುರುವಾರ ಬೆಳಿಗ್ಗೆ ಇಲ್ಲಿನ ವರ್ಸೋವ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.

ನಟಿ ಪಾಯಲ್‌ ಘೋಷ್‌ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಅನುರಾಗ್‌ ಕಶ್ಯಪ್‌ ಅವರಿಗೆ ಸಮನ್ಸ್‌ ನೀಡಿದ್ದರು.

ತಮ್ಮ ಇಬ್ಬರು ಸಹೋದ್ಯೋಗಿಗಳ ಜತೆ ಅನುರಾಗ್‌ ಠಾಣೆಗೆ ಬಂದರು. ಕೆಲವು ದಾಖಲೆ ಪತ್ರಗಳನ್ನೂ ತಂದಿದ್ದರು. ಅವರ ವಕೀಲರು ನಂತರದಲ್ಲಿ ಠಾಣೆಗೆ ಬಂದರು.

ಅನುರಾಗ್‌ ಕಶ್ಯಪ್‌ 2013ರಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ನಟಿ ಪಾಯಲ್‌ ಘೋಷ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT