ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿಗೆ ಆಟ: ಬ್ಯಾಂಕ್‌ ಅಧಿಕಾರಿಗಳ ಪರದಾಟ!

Rats make alarm go off in bank
Last Updated 4 ಸೆಪ್ಟೆಂಬರ್ 2018, 13:24 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ: ನೆರೆಯ ಶಾಮ್ಲಿ ಜಿಲ್ಲೆಯ ಇಂಡಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಸೋಮವಾರ ಆಕಸ್ಮಿಕವಾಗಿ ಎಚ್ಚರಿಕೆಯ ಕರೆಗಂಟೆ ಮೊಳಗಿದ್ದು, ಬ್ಯಾಂಕಿಗೆ ದರೋಡೆಕೋರರು ನುಗ್ಗಿರಬಹುದೆಂಬ ಆತಂಕದ ಪರಿಸ್ಥಿತಿ ಕೆಲ ಕಾಲ ನಿರ್ಮಾಣವಾಗಿತ್ತು. ಆದರೆ ಇಲಿಗಳ ಓಡಾಟದಿಂದಾಗಿ ಕರೆಗಂಟೆ ಮೊಳಗಿರುವುದು ಗೊತ್ತದ ಮೇಲೆ ಬ್ಯಾಂಕ್‌ ಅಧಿಕಾರಿಗಳು ಮತ್ತು ಪೊಲೀಸರು ನಿರಾಳಗೊಂಡಿದ್ದಾರೆ.

ಬ್ಯಾಂಕಿನ ಶಾಖೆಯಲ್ಲಿ ಇದ್ದಕ್ಕಿದ್ದಂತೆ ಎಚ್ಚರಿಕೆ ಕರೆಗಂಟೆ ಮೊಳಗಿದ್ದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡು, ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಂಕಿಗೆ ಕಳ್ಳರು ನುಗ್ಗಿರಬಹುದೆಂಬ ಅನುಮಾನದಿಂದ ಬ್ಯಾಂಕ್‌ ಅಧಿಕಾರಿಗಳು ಮತ್ತು ಪೊಲೀಸರು ಕ್ಷಣಾರ್ಧದಲ್ಲಿ ಬ್ಯಾಂಕ್‌ನತ್ತ ದೌಡಾಯಿಸಿದ್ದರು.

‘ಸ್ಥಳ ಪರಿಶೀಲಿಸಿದಾಗ, ಬ್ಯಾಂಕಿನಲ್ಲಿ ಯಾವುದೇ ಅನುಮಾನಾಸ್ಪದವಾದ ಕುರುಹು ಕಾಣಿಸಲಿಲ್ಲ. ಎಚ್ಚರಿಕೆ ಕರೆಗಂಟೆ ವ್ಯವಸ್ಥೆ ಬಳಿ ಇಲಿಗಳು ಓಡಾಡಿದ್ದು, ಇದರಿಂದಾಗಿಯೇ ಕರೆಗಂಟೆ ಮೊಳಗಿದೆ. ತಕ್ಷಣ ಅದನ್ನು ಸ್ಥಗಿತಗೊಳಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT