ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನನಷ್ಟ ಪ್ರಕರಣ | ಕಾನೂನು ಕ್ರಮ ಎದುರಿಸಲು ಸಿದ್ಧ: ಅಣ್ಣಾಮಲೈ

Last Updated 17 ಏಪ್ರಿಲ್ 2023, 16:12 IST
ಅಕ್ಷರ ಗಾತ್ರ

ಚೆನ್ನೈ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದಕ್ಕೆ ₹500 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ಆಡಳಿತಾರೂಢ ಡಿಎಂಕೆ ನ್ಯಾಯಾಂಗ ನೋಟಿಸ್‌ ಜಾರಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ,‘ಕಾನೂನು ಕ್ರಮ ಎದುರಿಸಲು ಸಿದ್ಧನಿದ್ದೇನೆ’ ಎಂದಿದ್ದಾರೆ.

ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದಕ್ಕೆ ಸಮಾನ ಮೊತ್ತ ಪರಿಹಾರ ನೀಡುವಂತೆ ಡಿಎಂಕೆಗೆ ನ್ಯಾಯಾಂಗ ನೋಟಿಸ್‌ ನೀಡುವುದಾಗಿಯೂ ಅವರು ಸೋಮವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ, ‘ಡಿಎಂಕೆ ಈ ಹಿಂದೆ ಆಡಳಿತದಲ್ಲಿದ್ದಾಗ ನಡೆದಿರುವ ಮೆಟ್ರೊ ರೈಲು ಯೋಜನೆ ಹಗರಣದ ಕುರಿತು ದಾಖಲೆಗಳಿವೆ. ನಾವು ಅದನ್ನು ಸಿಬಿಐಗೆ ಸಲ್ಲಿಸುತ್ತೇವೆ’ ಎಂದಿದ್ದಾರೆ.

ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ವಿರುದ್ಧ ಹರಿಹಾಯ್ದ ಅಣ್ಣಾಮಲೈ ಅವರು, ‘ನಿಮ್ಮ ಪಕ್ಷದ ಅಧ್ಯಕ್ಷರಿಗೆ ಮತ್ತು ಇತರರಿಗೆ ಸಿಬಿಐ ಸಮನ್ಸ್‌ ಜಾರಿಯಾಗುವವರೆಗೆ ಸುಮ್ಮನಿರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT