ದೇಶ ವಿಭಜನೆಯ ವರ್ಷಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘1947ರ ದೇಶ ವಿಭಜನೆಯ ಕರಾಳ ದಿನ‘ದಂದು ಲಕ್ಷಾಂತರ ಜನರು ಸ್ಥಳಾಂತರಗೊಂಡರು, ಸಾಕಷ್ಟು ಮಂದಿ ಮೃತಪಟ್ಟಿರು. ನಿರಾಶ್ರಿತರಾದ ಲಕ್ಷಾಂತರ ಮಂದಿ ತಮ್ಮ ಜೀವನವನ್ನು ಪುನಃ ಕಟ್ಟಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ಧೈರ್ಯವು ಮೆಚ್ಚುವಂತಹದ್ದು ಎಂದು ಬರೆದುಕೊಂಡಿದ್ದಾರೆ.