ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಅಂಡ್ ಡಿ) ಅತ್ಯಂತ ಕಡಿಮೆ ಪ್ರಮಾಣದ ಹಣವನ್ನು ವಿನಿಯೋಗ ಮಾಡಲಾಗುತ್ತಿದೆ. 2005–06ರಲ್ಲಿ ದೇಶದ ಜಿಡಿಪಿಯ ಶೇ 0.8ರಷ್ಟನ್ನು ಆರ್ ಅಂಡ್ ಡಿಗೆ ವಿನಿಯೋಗಿಸಲಾಗುತ್ತಿತ್ತು. 2018ರಲ್ಲಿ ಇದುದೇಶದ ಜಿಡಿಪಿಯ ಶೇ 0.65ರಷ್ಟಕ್ಕೆ ಕುಸಿದಿದೆ.ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಭಾರತವು ಸದಸ್ಯನಾಗಿರುವ ವಿವಿಧ ವ್ಯಾಪಾರ ಒಕ್ಕೂಟದ ಸದಸ್ಯ ದೇಶಗಳು ಆರ್ ಅಂಡ್ ಡಿಗೆ ವಿನಿಯೋಗಿಸುತ್ತಿರುವ ಹಣದ ಪ್ರಮಾಣಕ್ಕೆ ಹೋಲಿಸಿದರೆ, ಭಾರತವು ವಿನಿಯೋಗಿಸುತ್ತಿರುವ ಪ್ರಮಾಣ ತೀರಾ ಕಡಿಮೆ. ಜತೆಗೆ ಈ ವಲಯದಲ್ಲಿ ಸರ್ಕಾರದ್ದೇ ಪಾರಮ್ಯ ಇದೆ. ‘ಇದು ಅತ್ಯಂತ ಕಳವಳಕಾರಿ ಸಂಗತಿ’ ಎಂದು ನೀತಿ ಆಯೋಗವು ತನ್ನ ‘ನಾವೀನ್ಯ ಸೂಚ್ಯಂಕ’ ವರದಿಯಲ್ಲಿ ಹೇಳಿದೆ. ಇವೆಲ್ಲವೂ ಆರ್ ಅಂಡ್ ಡಿ ವಲಯದ ಬೆಳವಣಿಗೆಗೆ ಕಡಿವಾಣ ಹಾಕಿವೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ನೀತಿ ಆಯೋಗವು ಅಭಿಪ್ರಾಯಪಟ್ಟಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.