ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ: ಬಿಜೆಪಿ ವಕ್ತಾರನ ಮನೆ ಮೇಲೆ ಮತ್ತೆ ದಾಳಿ

Published : 31 ಆಗಸ್ಟ್ 2024, 16:06 IST
Last Updated : 31 ಆಗಸ್ಟ್ 2024, 16:06 IST
ಫಾಲೋ ಮಾಡಿ
Comments

ಇಂಫಾಲ್: ಮಣಿಪುರದ ಬಿಜೆಪಿ ವಕ್ತಾರ ಮೈಕಲ್ ಲಾಮಜಾಂಥಾಂಗ್ ಅವರ ಪೂರ್ವಜರ ನಿವಾಸಕ್ಕೆ ಅಪರಿಚಿತ ದುಷ್ಕರ್ಮಿಗಳು ಶನಿವಾರ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟುಯಿಬಾಂಗ್ ಉಪ ವಿಭಾಗದ ಪೆನಿಯೆಲ್ ಗ್ರಾಮದಲ್ಲಿರುವ ಮನೆಯ ಆವರಣದೊಳಗೆ ನಿಲ್ಲಿಸಿದ್ದ ಕಾರನ್ನು ಸಹ ದಾಳಿಯ ಸಮಯದಲ್ಲಿ ಸುಟ್ಟು ಹಾಕಲಾಗಿದೆ.

ಇದೇ ಮನೆಯ ಮೇಲೆ ಹಿಂದಿನ ವಾರ ನಡೆದ ದಾಳಿಗೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಚುರಚಂದಪುರ ಜಿಲ್ಲಾಧಿಕಾರಿ ಧರುಣ್‌ ಕುಮಾರ್ ಎಸ್. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಮನೆಯ ಮೇಲೆ ಮೂರನೇ ಬಾರಿಗೆ ನಡೆದ ದಾಳಿಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್‌, ‘ಶಾಂತಿ ರ‍್ಯಾಲಿಗಳ ಸೋಗಿನಲ್ಲಿ ಆಗಾಗ್ಗೆ ನಮ್ಮ ಜನರನ್ನು (ಥಾಡೌ) ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇಂತಹ ಪ್ರಚೋದನಾಕಾರಿ ಕೃತ್ಯಗಳನ್ನು ಸಹಿಸುವುದಿಲ್ಲ. ಮುನ್ನೆಚ್ಚರಿಕೆಯ ಹೊರತಾಗಿಯೂ ಭದ್ರತೆ ಒದಗಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ‘ಎಕ್ಸ್‌’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕುಕಿಗಳ ಅತಿದೊಡ್ಡ ಉಪ ಬುಡಕಟ್ಟು ಥಾಡೌ ಜನಾಂಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT