ಕೋಲ್ಕತ್ತ: ಇಲ್ಲಿನ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕೊಳಗಾಗಿ, ಕೊಲೆಯಾದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮರಣ ಪ್ರಮಾಣಪತ್ರ, ಘಟನೆ ನಡೆದ ಏಳು ತಿಂಗಳ ಬಳಿಕ ಪೋಷಕರ ಕೈಸೇರಿದೆ.

ಪಶ್ಚಿಮ ಬಂಗಾಳ ಆರೋಗ್ಯ ಕಾರ್ಯದರ್ಶಿ ಎನ್.ಎಸ್. ನಿಗಮ್ ಅವರು ಆರ್.ಜಿ ಕರ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್, ಉಪ ಪ್ರಾಂಶುಪಾಲರ ಜೊತೆ ಮೃತ ವಿದ್ಯಾರ್ಥಿನಿಯ ಮನೆಗೆ ಬುಧವಾರ ರಾತ್ರಿ ಭೇಟಿ ನೀಡಿ, ಪೋಷಕರಿಗೆ ಮರಣ ಪ್ರಮಾಣ ಪತ್ರದ ದಾಖಲೆಗಳನ್ನು ಹಸ್ತಾಂತರಸಿದರು.

‘ಸಂತ್ರಸ್ತೆಯ ಪೋಷಕರು ಮರಣ ಪ್ರಮಾಣಪತ್ರದ ಮೂಲ ಪ್ರತಿಯನ್ನು ಬಯಸಿದ್ದರು. ಅವರ ಮನೆಗೆ ಭೇಟಿ ನೀಡಿ, ಅದನ್ನು ನಾವು ಹಸ್ತಾಂತರಿಸಿದ್ದೇವೆ’ ಎಂದು ನಿಗಮ್ ತಿಳಿಸಿದ್ದಾರೆ.

‘ಘಟನೆ ನಡೆದ ಆಗಸ್ಟ್ 9ರಿಂದ ನಾವು ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದ್ದೆವು. ಆರೋಗ್ಯ ಕಾರ್ಯದರ್ಶಿ ಅಚನಕ್ಕಾಗಿ ನಮ್ಮ ಮನೆಗೆ ಬಂದು ದಾಖಲೆ ನೀಡಿದ್ದಾರೆ. ಮೂಲ ದಾಖಲೆಗೆ ನಾವು ಹರಸಾಹಸಪಟ್ಟೆವು. ಜನವರಿಯಲ್ಲಿ ಇ–ಮೇಲ್ ಕಳಿಸಿದ್ದೆವು. ಅದಾಗ್ಯೂ ಇಲಾಖೆಯಿಂದ ಇಲಾಖೆಗೆ ಅಲೆದಾಡಿಸಿದ್ದರು. ಯಾರೂ ಸಹಕಾರ ನೀಡಿರಲಿಲ್ಲ’ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.