ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿರುವ ಅಂಗವಿಕಲರ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು
Published 29 ಜುಲೈ 2023, 14:02 IST
Last Updated 29 ಜುಲೈ 2023, 14:02 IST
ಅಕ್ಷರ ಗಾತ್ರ

ನವದೆಹಲಿ: ‘ಅಂಗವಿಕಲರ ರಕ್ಷಣೆಗಾಗಿಯೇ ಅಸ್ತಿತ್ವದಲ್ಲಿರುವ ಕಾನೂನುಗಳೊಂದಿಗೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಒಟ್ಟುಗೂಡಿಸಿ’ ಎಂದು ಅಂಗವಿಕಲರ ಹಕ್ಕುಗಳ ಸಂಘಟನೆಗಳು ಮತ್ತು ಹೋರಾಟಗಾರರು ಕಾನೂನು ಆಯೋಗಕ್ಕೆ ಆಗ್ರಹಿಸಿದ್ದಾರೆ.

ಯುಸಿಸಿ ಕುರಿತಂತೆ ಸಾರ್ವಜನಿಕ ಅಭಿಪ್ರಾಯ ಕೋರಿರುವ ಕಾನೂನು ಆಯೋಗದ ಬಳಿ, ಅಂಗವಿಕಲರ ದೃಷ್ಟಿಕೋನದಿಂದಲೇ ಈ ಶಿಫಾರಸನ್ನು ಪರಿಗಣಿಸಬೇಕು ಎಂದು 220 ಅಂಗವಿಕಲರ ಸಂಘಟನೆಗಳು ಹಾಗೂ ಹೋರಾಟಗಾರರು ಹೇಳಿದ್ದಾರೆ.

‘ಏಕರೂಪ ನಾಗರಿಕ ಸಂಹಿತೆಯಲ್ಲಿ ಅಂಗವಿಕಲರ ಹಕ್ಕುಗಳು ಧ್ವನಿಸಲಿ. ಅವುಗಳಿಗೆ ರಕ್ಷಣೆಯ ಅಗತ್ಯವಿದೆ’ ಎಂದು ಪ್ರಮುಖ ಹೋರಾಟಗಾರರು, ವಕೀಲರು, ಅಂಗವಿಕಲರು ಪ್ರತಿಪಾದಿಸಿದ್ದಾರೆ.

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುರಳೀಧರನ್, ದೆಹಲಿ ಹೈಕೋರ್ಟ್‌ನ ವಕೀಲ ರೋಮಾ ಭಗತ್, ಹೋರಾಟಗಾರ್ತಿ ಸಾಧನಾ ಆರ್ಯ, ಸೀಮಾ ಬಾಕರ್ ಮನವಿಗೆ ಸಹಿ ಹಾಕಿದ ಪ್ರಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT