ಪಟ್ನಾ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಆರ್ಜೆಡಿ ಶಾಸಕ ರಿತಲಾಲ್ ಯಾದವ್ ಪಟ್ನಾದ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಾಗಿದ್ದು, ಯಾದವ್ ಮತ್ತು ಅವರ ಮೂವರು ಸಹಚರರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದನಪುರ ಕ್ಷೇತ್ರದ ಆರ್ಜೆಡಿ ಶಾಸಕ ರಿತಲಾಲ್ ಯಾದವ್ ಮತ್ತು ಆತನ ಮೂವರು ಸಹಚರರಾದ ಚಿಕ್ಕು ಯಾದವ್, ಪಿಂಕು ಯಾದವ್ ಮತ್ತು ಶ್ರವಣ್ ಯಾದವ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದನಪುರ ನ್ಯಾಯಾಲಯದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಯಾದವ್, ನಾನು ರಾಜಕೀಯ ಸಂಚಿನ ಸಂತ್ರಸ್ತನಾಗಿದ್ದೇನೆ. ನನ್ನ ಜೀವಕ್ಕೆ ಅಪಾಯವಿದೆ. ನನ್ನ ಕೊಲೆ ಆಗಬಹುದು. ನಾನು ಜೀವಂತವಿದ್ದರೆ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತೇನೆ. ಹಲವು ಅಧಿಕಾರಿಗಳು ನನ್ನ ವಿರುದ್ಧವಾಗಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಮತ್ತೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

‘ನನ್ನ ಹತ್ಯೆಗೆ ಕಳೆದ ಕೆಲ ತಿಂಗಳುಗಳ ಹಿಂದೆ ಸಂಚು ರೂಪಿಸಲಾಗಿದೆ. ಕೆಲ ಅಧಿಕಾರಿಗಳು ನನ್ನ ವಿರೋಧಿಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರವನ್ನು ನೀಡಿದ್ದು, ಹತ್ಯೆಗೆ ಸಂಚು ರೂಪಿಸಿದ್ದಾರೆ’ ಎಂದೂ ದೂರಿದ್ದಾರೆ.

ಯಾದವ್ ಮತ್ತು ಸಹಚರರು ಪಟ್ನಾದ ದನಪುರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಪಟ್ನಾ ಪಶ್ಚಿಮ ವಿಭಾಗದ ಎಸ್ಪಿ ಶರತ್ ಹೇಳಿದ್ದಾರೆ.

ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಶಾಸಕ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಪ್ರಿಲ್ 11ರಂದು ಪೊಲೀಸರು ದಾಳಿ ನಡೆಸಿದ್ದರು.

ಕಳೆದ ಕೆಲವು ದಿನಗಳಿಂದ ಆರೋಪಿಗಳಿಂದ ಸುಲಿಗೆ ಮತ್ತು ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಲ್ಡರ್ ಒಬ್ಬರು ದೂರು ದಾಖಲಿಸಿದ್ದರು. ಆರೋಪಿಗಳು ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂಬ ಆರೋಪಗಳೂ ಇದ್ದವು. ದೂರುದಾರರು ಪಟ್ನಾದ ಖಗಾಲ್ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದರು.

ಶೋಧದ ಸಮಯದಲ್ಲಿ ಪೊಲೀಸರು ₹10 ಲಕ್ಷ. ನಗದು, ₹77 ಲಕ್ಷ ಮೌಲ್ಯದ ಚೆಕ್ಗಳು, ಆರು ಖಾಲಿ ಚೆಕ್ಗಳು, ಆಸ್ತಿಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ 14 ಡೀಡ್ ದಾಖಲೆಗಳು ಮತ್ತು 17 ಚೆಕ್ ಪುಸ್ತಕಗಳು ಸೇರಿದಂತೆ ಹಲವು ಅಪರಾಧ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಟ್ನಾ ಪೊಲೀಸರು ಏಪ್ರಿಲ್ 11ರಂದು ತಿಳಿಸಿದ್ದರು.

ಪಟ್ನಾದಲ್ಲಿ ಶೋಧ ನಡೆಸಿದಾಗ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.