ಈ ಸಂಬಂಧ ಎಕ್ಸ್(ಟ್ವಿಟರ್) ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಕ್ಕೆ ಹೆಮ್ಮೆಯ ಸಂಗತಿಯಿದು. ವರ್ಣಿಸಲಾಗದ ಸೌಂದರ್ಯ ಹೊಂದಿರುವ ಹೊಯ್ಸಳ ದೇವಾಲಯಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ನಮ್ಮ ಪೂರ್ವಜರ ಅಸಾಧಾರಣವಾದ ಕರಕುಶಲತೆ ಇದಾಗಿದೆ ಎಂದು ತಿಳಿಸಿದ್ದಾರೆ.