ನವದೆಹಲಿ: 1984ರಲ್ಲಿ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದ ಇಲ್ಲಿನ ಜನಕಪುರಿ ಪ್ರದೇಶದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಸಜ್ಜನ ಕುಮಾರ್ ಅವರನ್ನು ದೆಹಲಿಯ ನ್ಯಾಯಾಲಯವೊಂದು ಖುಲಾಸೆಗೊಳಿಸಿ ಗುರುವಾರ ಆದೇಶಿಸಿದೆ.

‘ಸಜ್ಜನ ಕುಮಾರ್ ವಿರುದ್ಧದ ಆರೋಪಗಳನ್ನು ಸಂಶಯಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಆದೇಶ ಪ್ರಕಟಿಸಿದ ವಿಶೇಷ ನ್ಯಾಯಾಧೀಶ ದಿಗ್ವಿನಯ ಸಿಂಗ್ ಹೇಳಿದರು.

‘ಈ ಹಿಂಸಾಚಾರಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಹಾಗೂ ಸಂತ್ರಸ್ತರು ಅನುಭವಿಸುತ್ತಿರುವ ನೋವು ನ್ಯಾಯಾಲಯಕ್ಕೆ ಅರ್ಥವಾಗುತ್ತದೆ. ಆದರೆ, ಈ ಪ್ರಕರಣ ಕುರಿತು ನೀಡುವ ತೀರ್ಪು ಯಾವುದೇ ಭಾವೋದ್ವೇಗಳಿಂದ ಮುಕ್ತವಾಗಿರುವುದು ಮುಖ್ಯ’ ಎಂದು ನ್ಯಾಯಾಧೀಶ ಹೇಳಿದರು.

‘ಸಾಕ್ಷ್ಯಾಧಾರಗಳ ಆಧಾರದ ಮೇಲಷ್ಟೆ ಆರೋಪಿಯು ತಪ್ಪಿತಸ್ಥ ಎಂಬುದಾಗಿ ತೀರ್ಮಾನಿಸಲು ಸಾಧ್ಯ. ದುರದೃಷ್ಟವಶಾತ್, ಪ್ರಾಸಿಕ್ಯೂಷನ್ನವರು ಪಾಟಿಸವಾಲಿಗೆ ಒಳಪಡಿಸಿದ ಬಹುತೇಕ ಸಾಕ್ಷ್ಯಗಳು ವದಂತಿಗಳೇ ಆಗಿದ್ದವು ಅಥವಾ ಮೂರು ದಶಕ ಕಳೆದರೂ ಆರೋಪಿಗಳನ್ನು ಗುರುತಿಸುವಲ್ಲಿ ಸಾಕ್ಷಿಗಳು ವಿಫಲರಾದರು’ ಎಂದೂ ನ್ಯಾಯಾಧೀಶ ಹೇಳಿದರು.

‘ಅಪರಾಧ ನಡೆದ ಸ್ಥಳದಲ್ಲಿ ಸಜ್ಜನ ಕುಮಾರ್ ಇದ್ದರು ಅಥವಾ ಅವರನ್ನು ಆ ಸ್ಥಳದಲ್ಲಿ ಬೇರೊಬ್ಬರು ನೋಡಿದ್ದರು ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯ ಇಲ್ಲ. ಗುಂಪು ಹಲ್ಲೆ ಅಥವಾ ಹಿಂಸಾಚಾರಕ್ಕೆ ಅವರು ಪಿತೂರಿ ನಡೆಸಿದ್ದರು ಎಂಬುದನ್ನು ಸಾಬೀತು ಮಾಡುವ ಸಾಕ್ಷ್ಯಗಳೂ ಇಲ್ಲ’ ಎಂದು ನ್ಯಾಯಾಲಯ ಪ್ರಕಟಿಸಿರುವ 60 ಪುಟಗಳ ಆದೇಶದಲ್ಲಿ ಹೇಳಲಾಗಿದೆ.

ಬೇರೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸಜ್ಜನ ಕುಮಾರ್ ಅವರಿಗೆ ಕಳೆದ ವರ್ಷ ಫೆಬ್ರುವರಿ 25ರಂದು ವಿಚಾರಣಾ ನ್ಯಾಯಾಲಯವೊಂದು ಜೈಲುಶಿಕ್ಷೆ ವಿಧಿಸಿದ್ದು, ಸದ್ಯ ಅವರು ದೆಹಲಿಯ ಸರಸ್ವತಿ ವಿಹಾರ ಪ್ರದೇಶದ ಜೈಲಿನಲ್ಲಿದ್ದಾರೆ.

ಆಘಾತದಲ್ಲಿ ಸಂತ್ರಸ್ತರ ಕುಟುಂಬಸ್ಥರು

ಜನಕಪುರಿ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ ಕುಮಾರ್ ಅವರನ್ನು ಖುಲಾಸೆಗೊಳಿಸಿ ದೆಹಲಿಯ ನ್ಯಾಯಾಲಯೊಂದು ಆದೇಶ ಪ್ರಕಟಿಸಿಸುತ್ತಿದ್ದಂತೆಯೇ ನ್ಯಾಯಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದವರ ಮುಖದಲ್ಲಿ ನಿರಾಸೆ ಮನದಲ್ಲಿ ದುಃಖ ಮಡುಗಟ್ಟಿತ್ತು. ಆದೇಶ ಹೊರಬಿದ್ದ ಬೆನ್ನಲ್ಲೇ ಹಿಂಸಾಚಾರದ ವೇಳೆ ತಾವು ಕಂಡ ಭೀಕರ ದೃಶ್ಯಗಳನ್ನು ತಮ್ಮ ಕಣ್ಣೆದುರೇ ತಮ್ಮವರನ್ನು ಕಳೆದುಕೊಂಡ ಹೃದಯವಿದ್ರಾವಕ ಕ್ಷಣಗಳನ್ನು ಅನೇಕರು ಹಂಚಿಕೊಂಡರು.

‘ತಂದೆಯನ್ನು ನನ್ನ ಕಣ್ಣೆದುರೇ ಜೀವಂತವಾಗಿ ಸುಟ್ಟು ಹಾಕಿದರು. ನ್ಯಾಯಕ್ಕಾಗಿ ಕಳೆದ 42 ವರ್ಷಗಳಿಂದ ಒಂದು ಕೋರ್ಟ್ನಿಂದ ಮತ್ತೊಂದು ಕೋರ್ಟ್ಗೆ ಎಡತಾಕುತ್ತಿದ್ದೇನೆ’ ಎಂದು ನಿರ್ಮಲ ಕೌರ್ ಕಣ್ಣೀರು ಹಾಕಿದರು.

‘ಆ ದಿನ ನನ್ನ ಕುಟುಂಬವೇ ನಾಶವಾಯಿತು. ನನ್ನ ಜೀವನದಲ್ಲಿ ಖುಷಿಯ ಕ್ಷಣಗಳೇ ಇಲ್ಲದಂತಾಗಿದೆ. ಈಗಲೂ ನನಗೆ ನ್ಯಾಯ ಮರೀಚಿಕೆಯಾಗಿದೆ’ ಆಕೆ ಬಿಕ್ಕಳಿಸಿದರು. ವಜೀರ್ ಸಿಂಗ್ ಬಾಗಿ ಕೌರ್ ಸೇರಿ ನ್ಯಾಯಕ್ಕಾಗಿ ಕೋರ್ಟ್ ಹೊರಗೆ ಕಾಯುತ್ತಿದ್ದವರು ಇದೇ ರೀತಿ ಹತಾಶೆ ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬಗಳ ಸದಸ್ಯರು ಇದೇ ವೇಳೆ ನ್ಯಾಯಾಲಯದ ಹೊರಗೆ ಪ್ರತಿಭಟನೆಯನ್ನೂ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.