ನವದೆಹಲಿ: ಲೋಕಸಭೆಯಲ್ಲಿ ಉತ್ತಮ ಸಾಧನೆ ಮಾಡಿದ 17 ಸಂಸದರಿಗೆ ಮತ್ತು ಎರಡು ಸಂಸದೀಯ ಸಮಿತಿಗಳಿಗೆ ‘ಸಂಸದ ರತ್ನ–2025’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಭರ್ತೃಹರಿ ಮಹತಾಬ್ (ಬಿಜೆಪಿ, ಒಡಿಶಾ), ಎನ್.ಕೆ. ಪ್ರೇಮಚಂದ್ರನ್ (ಕ್ರಾಂತಿಕಾರ ಸಮಾಜವಾದಿ ಪಕ್ಷ, ಕೇರಳ), ಸುಪ್ರಿಯಾ ಸುಳೆ (ಎನ್ಸಿಪಿ– ಶರದ್ ಪವಾರ್ ಬಣ, ಮಹಾರಾಷ್ಟ್ರ) ಮತ್ತು ಶ್ರೀರಂಗ ಅಪ್ಪ ಬಾರ್ನೆ (ಶಿವಸೇನಾ, ಮಹಾರಾಷ್ಟ್ರ) ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಬಿಜೆಪಿ ಸಂಸದರಾದ ಸ್ಮಿತಾ ವಾಘ್, ಮೇಧಾ ಕುಲಕರ್ಣಿ, ಪ್ರವೀಣ್ ಪಟೇಲ್, ರವಿಕಿಶನ್, ನಿಶಿಕಾಂತ್ ದುಬೆ, ಬಿದ್ಯುತ್ ಬರನ್ ಮಹಾತೊ, ಪಿ.ಪಿ. ಚೌಧರಿ, ಮದನ್ ರಾಥೋಡ್, ದಿಲೀಪ್ ಸೈಕಿಯಾ, ಶಿವಸೇನಾ– ಉದ್ಧವ್ ಬಣದ ಅರವಿಂದ ಸಾವಂತ್, ಶಿಂದೆ ಬಣದ ನರೇಶ್ ಗಣಪತ್ ಮಹಸ್ಕೆ, ಕಾಂಗ್ರೆಸ್ನ ವರ್ಷಾ ಗಾಯಕ್ವಾಡ್ ಹಾಗೂ ಡಿಎಂಕೆಯ ಸಿ.ಎನ್. ಅಣ್ಣಾದೊರೈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವರದಿಗಳ ಗುಣಮಟ್ಟ ಮತ್ತು ಶಾಸಕಾಂಗದ ಮೇಲ್ವಿಚಾರಣೆಗೆ ನೀಡಿದ ಕೊಡುಗೆಗೆ ಹಣಕಾಸು ಮತ್ತು ಕೃಷಿ ಇಲಾಖೆಯ ಎರಡು ಸ್ಥಾಯಿ ಸಮಿತಿಗಳಿಗೆ ಪ್ರಶಸ್ತಿ ದೊರೆತಿದೆ. ಮಹತಾಬ್ ಹಣಕಾಸು ಸಮಿತಿಗೆ ಹಾಗೂ ಚರಣ್ಜಿತ್ ಸಿಂಗ್ ಚನ್ನಿ ಕೃಷಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿದ್ದಾರೆ.

ಸತತ ಮೂರು ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ನೀಡಿದ್ದ ಸುಸ್ಥಿರ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಇದರಲ್ಲಿ ನಾಲ್ಕು ತೀರ್ಪುಗಾರರ ವಿಶೇಷ ಪ್ರಶಸ್ತಿಗಳೂ ಒಳಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.