ಚೆನ್ನೈ:ಆದಾಯಕ್ಕೂ ಮೀರಿದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಜೈಲಿನಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಅನುಭವಿಸುತ್ತಿರುವಜಯಲಲಿತಾ ಆಪ್ತರಾಗಿದ್ದ ವಿ.ಕೆ. ಶಶಿಕಲಾ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲ ಎನ್.ರಾಜಾ ಸೆಂತೂರ್ ಪಾಂಡಿಯನ್ ತಿಳಿಸಿದ್ದಾರೆ.

ಇದೇ ವೇಳೆ ಶಶಿಕಲಾ ಅವರನ್ನು ಪಕ್ಷದಿಂದ ಹೊರಗಿಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಐಎಡಿಎಂಕೆ ತಿಳಿಸಿದೆ.

‘ನಿಯಮಗಳ ಪ್ರಕಾರ ಸನ್ನಡತೆಗೆ ಪ್ರತಿ ತಿಂಗಳಿಗೆ ಮೂರು ದಿನಗಳ ಶಿಕ್ಷೆ ಇಳಿಕೆಯಾಗಲಿದೆ. ಇಲ್ಲಿಯವರೆಗೂ ಅವರು 43 ತಿಂಗಳು ಜೈಲಿನಲ್ಲಿ ಕಳೆದಿದ್ದು, 129 ದಿನಗಳ ಜೈಲು ಶಿಕ್ಷೆ ಇಳಿಕೆಗೆ ಅವರು ಅರ್ಹರಾಗಿದ್ದಾರೆ. ಇದನ್ನು ಇಲ್ಲಿಯವರೆಗೂ ಯಾರಿಗೂ ನಿರಾಕರಿಸಿಲ್ಲ’ ಎಂದು ರಾಜಾ ತಿಳಿಸಿದ್ದಾರೆ.

ಹೀಗಾಗಿ 2021ರ ಜನವರಿ ಬದಲಾಗಿ ಇದೇ ಮಾಸಾಂತ್ಯದಲ್ಲಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶದಂತೆ ₹10 ಕೋಟಿ ದಂಡ ಪಾವತಿಗೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.