ಶ್ರೀನಗರ: ಸೌದಿ ಅರೇಬಿಯಾವು ಭಾರತೀಯ ಹಜ್ ಯಾತ್ರಿಕರ 52,000 ಸ್ಲಾಟ್ ರದ್ದು ಮಾಡಿರುವ ಕುರಿತಾದ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮತ್ತು ವಿರೋಧ ಪಕ್ಷದ ನಾಯಕಿ ಮೆಹಬೂಬ ಮುಫ್ತಿ, ಈ ವಿಷಯವನ್ನು ಸೌದಿ ನಾಯಕತ್ವದ ಜೊತೆ ಚರ್ಚಿಸುವಂತೆ ಒತ್ತಾಯಿಸಿದ್ದಾರೆ.

‘ಭಾರತೀಯರು ಹಜ್ ಯಾತ್ರೆಗೆ ಕಾಯ್ದಿರಿಸಲಾಗಿದ್ದ 52,000 ಸ್ಲಾಟ್ ರದ್ದು ಮಾಡಲಾಗಿದೆ ಎಂದು ವರದಿ ಬಂದಿದ್ದು, ಅದರಲ್ಲಿ ಬಹುತೇಕರು ಈಗಾಗಲೇ ಸಂಪೂರ್ಣ ಹಣ ಪಾವತಿಸಿದ್ದಾರೆ. ಈ ಬಗ್ಗೆ ತೀವ್ರ ಕಳವಳ ಉಂಟಾಗಿದ್ದು, ಇದರ ಪರಿಣಾಮಕ್ಕೊಳಗಾದ ಯಾತ್ರಿಕರ ಹಿತದೃಷ್ಟಿಯಿಂದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಸೌದಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಈ ವರ್ಷ ಹಜ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಸಾವಿರಾರು ಯಾತ್ರಿಕರ ದೃಷ್ಟಿಯಿಂದ ಈ ಕ್ರಮ ಅತ್ಯಂತ ಪ್ರಮುಖವಾದುದ್ದಾಗಿದೆ’ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸೌದಿ ನಾಯಕತ್ವದೊಂದಿಗೆ ಮಾತನಾಡುವಂತೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಈ ವಿಷಯವನ್ನು ಸೌದಿ ಸರ್ಕಾರದ ಜೊತೆ ಪ್ರಸ್ತಾಪಿಸಿ, ಭಾರತೀಯ ಯಾತ್ರಿಕರ ಹಜ್ ಕೋಟಾ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ನಾನು ಪ್ರಧಾನಿಯನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.

ಹಜ್ ಕೋಟಾವನ್ನು ಕಡಿತಗೊಳಿಸುವ ಹಠಾತ್ ನಿರ್ಧಾರವು ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆಯನ್ನುಂಟುಮಾಡಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಸೌದಿ ಅರೇಬಿಯಾದಿಂದ ವಿಚಲಿತಗೊಳಿಸುವ ಸುದ್ದಿಗಳು ಹೊರಬರುತ್ತಿವೆ. ಭಾರತದ ಖಾಸಗಿ ಹಜ್ ಕೋಟಾದ ಶೇ 80ರಷ್ಟನ್ನು ಹಠಾತ್ತನೆ ಕಡಿತಗೊಂಳಿಸಲಾಗಿದೆ ಎಂದು ವರದಿಗಳು ಬರುತ್ತಿವೆ. ಈ ಹಠಾತ್ ನಿರ್ಧಾರವು ದೇಶದಾದ್ಯಂತ ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆಯನ್ನುಂಟುಮಾಡುತ್ತಿದೆ. ಸೌದಿ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚಿಸುವ ಮೂಲಕ ಪರಿಹಾರವನ್ನು ಪಡೆಯಲು ವಿದೇಶಾಂಗ ಸಚಿವಾಲಯವು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮುಫ್ತಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.