ನವದೆಹಲಿ (ಪಿಟಿಐ): ಮತದಾನದ ಅವಧಿ ಮುಗಿದ 48 ಗಂಟೆಯೊಳಗೆ ಮತಗಟ್ಟೆವಾರು ಮತದಾನದ ಪ್ರಮಾಣವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಚುನಾವಣೆ ಆಯೋಗಕ್ಕೆ ನಿರ್ದೇಶಿಸಲು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 17ರಂದು ನಡೆಸಲಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಘಟನೆ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ನ್ಯಾಯಪೀಠ ಸಮ್ಮತಿಸಿತು.

ಮತಗಟ್ಟೆವಾರು ಮತದಾನದ ಮಾಹಿತಿಯುಳ್ಳ ಫಾರಂ 17ಸಿ ನ್ನು ಪ್ರತಿ ಹಂತದ ಮತದಾನದ ಪ್ರಕ್ರಿಯೆ ಬಳಿಕ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಎನ್ಜಿಒ ಮನವಿ ಮಾಡಿದೆ.

ಲೋಕಸಭೆ ಚುನಾವಣೆಯ ಮೊದಲ ಎರಡು ಹಂತದ ಮತದಾನದ ಪ್ರಮಾಣವನ್ನು ಆಯೋಗವು, ಏಪ್ರಿಲ್ 30ರಂದು ಅಂದರೆ ಮೊದಲ ಹಂತದ ಮತದಾನದ 11 ದಿನ, ಎರಡನೇ ಹಂತದ ಮತದಾನದ 4 ದಿನದ ಬಳಿಕ ಪ್ರಕಟಿಸಿದೆ. ಮತದಾನದ ದಿನ ಪ್ರಕಟಿಸಿದ್ದಕ್ಕಿಂತ ಅಂಕಿಅಂಶಕ್ಕೆ ಹೋಲಿಸಿದರೆ, ಅಂತಿಮವಾಗಿ ಪ್ರಕಟಿಸಿದ ಪ್ರಮಾಣದಲ್ಲಿ ಶೇ 5ರಿಂದ 6ರಷ್ಟು ಏರಿಕೆಯಾಗಿತ್ತು ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.