ಬೆಂಗಳೂರು: ಭಾರತದಲ್ಲಿ ನಿಷೇಧಿತ ಜಿಪಿಎಸ್ ಸಾಧನವನ್ನು ಸಾಗಿಸಲು ಯತ್ನಿಸಿದ ಸ್ಕಾಟ್ಲ್ಯಾಂಡ್ ಮೂಲದ ಮಹಿಳಾ ಚಾರಣಿಗರೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಸ್ಕಾಟ್ಲ್ಯಾಂಡ್ನ ಹೀಥರ್ ಎನ್ನುವ ಮಹಿಳೆ ಭಾರತದ ಉತ್ತರಾಖಂಡದ ರಿಷಿಕೇಶ್ ಮತ್ತು ಇತರ ಸ್ಥಳಗಳಿಗೆ ಚಾರಣ ಪ್ರವಾಸ ಯೋಜಿಸಿದ್ದರು. ಡಿಸೆಂಬರ್ 31 ರಂದು ಅವರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಕೋರ್ಟ್ ಆದೇಶದ ಮೇಲೆ ಸಾಧನವನ್ನು ವಶಪಡಿಸಿಕೊಂಡು ಮಹಿಳೆಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಹೀಥರ್ ಅವರು Garmin inReach ಎಂಬ ಉಪಗ್ರಹ ಆಧಾರಿತ ಸಾಧನವನ್ನು ತೆಗೆದುಕೊಂಡು ಹೊರಟಿದ್ದರು. ಈ ಸಾಧನ ಭಾರತದಲ್ಲಿ ನಿಷೇಧವಾಗಿದೆ.

ತಮಗಾದ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೀಥರ್ ಅವರು, ಭಾರತದಲ್ಲಿ ಈ ಸಾಧನ ನಿಷೇಧವಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಬಂಧನದ ವೇಳೆ ಪೊಲೀಸರು ನನಗೆ ಯಾವುದೇ ತೊಂದರೆ ಮಾಡಲಿಲ್ಲ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೆ ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಿದರು ಎಂದಿದ್ದಾರೆ.

ಭಾರತಕ್ಕೆ ಬರುವ ಯಾತ್ರಿಗಳು ಸೆಟ್ಲೈಟ್ ಜಿಪಿಎಸ್ ಡಿವೈಸ್ ಸಾಧನ ತರುವುದರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ವಿಡಿಯೊ ಮಾಡಿದ್ದೇನೆ ಎಂದಿದ್ದಾರೆ.

ಸೆಟ್ಲೈಟ್ ಮೊಬೈಲ್, ಸೆಟ್ಲೈಟ್ ಜಿಪಿಎಸ್ ಡಿವೈಸ್ ಸಾಧನಗಳು ಅಪರಾಧ ಕೃತ್ಯಗಳಿಗೆ ಬಳಸುವ ಸಂಭವವಿರುವುದರಿಂದ ನಿಷೇಧ ಹೇರಲಾಗಿದೆ. ಈ ಡಿವೈಸ್ಗಳಿಗೆ ಕೆಲ ದೇಶದಲ್ಲಿ ಮಾನ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.